newsics.com
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ಜತೆಗೆ ನಟಿ ನಿಶ್ವಿಕಾ ನಾಯ್ಡು ಕಾಣಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ‘ವಿಶ್ವಂಭರ’ ಚಿತ್ರಕ್ಕೆ ಮತ್ತೊಬ್ಬ ನಟಿಯ ಎಂಟ್ರಿ ಆಗಿದೆ.
ಈಗಾಗಲೇ ವಿಶ್ವಂಭರ ಚಿತ್ರದಲ್ಲಿ ಆಶಿಕಾ ರಂಗನಾಥ್ ನಟಿಸಿದ್ದು, ನಿಶ್ವಿಕಾ ನಾಯ್ಡು ಅವರು ಚಿತ್ರದ ವಿಶೇಷ ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ
ಈ ಐಟಂ ಸಾಗಿಂಗೆ ಭೀಮ್ಸ್ ಅವರು ಸಂಗೀತ ಸಯೋಜನೆ ಮಾಡಿದ್ದು, ಈ ಹಾಡಿನಲ್ಲಿ ಮೆಗಸ್ಟಾರ್ ಚಿರಂಜೀವಿ ಅವರು ಕೂಡ ಇರಲಿದ್ದಾರೆ ಎಂದು ವರದಿಯಾಗಿದೆ. ವಿಶೇಷವೆಂದರೆ ಕನ್ನಡದಲ್ಲಿ ತೆರೆಕಂಡ ಕರಟಕ ಗಮನಕ ಸಿನಿಮಾದಲ್ಲಿ ನಿಶ್ವಕಾ ಈಗಾಗಲೇ ಹಿತಲಕ ಕರಿಬ್ಯಾಡ ಮಾವ ಹಾಡಿನಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದರು. ಇದೇ ಹಾಡನ್ನು ನೋಡಿಯೇ ಇದೀಗ ವಿಶ್ವಂಭರ ಚಿತ್ರತಂಡ ಈ ನಟಿಯನ್ನು ತಮ್ಮ ಚಿತ್ರಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡದಲ್ಲಿ ಈಗಾಗಲೇ ಬಂದಿರುವ ‘ಹಿತಲಕ ಕರಿಬ್ಯಾಡ ಮಾವ’ ಹಾಡಿನಲ್ಲಿ ನಿಶ್ವಿಕಾ ನಾಯ್ಡು ಅವರ ಡ್ಯಾನ್ಸ್ ನೋಡಿಯೇ ‘ವಿಶ್ವಂಭರ’ ಚಿತ್ರತಂಡ ಈ ನಟಿಯನ್ನು ತಮ್ಮ ಚಿತ್ರಕ್ಕೆ ಕರೆಸಿಕೊಂಡಿದೆಯಂತೆ.