newsics.com
ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಮಹಿಳೆ ಹಾಗೂ ವ್ಯಕ್ತಿಯೊಬ್ಬನು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.ಈ ಆಘಾತಕಾರಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ವಿಡಿಯೋದಲ್ಲಿ ಅನಿಲ ಸೋರಿಕೆಯ ವೇಳೆಯಲ್ಲಿ ಮಹಿಳೆ ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ತೆರೆದಿಟ್ಟಿದ್ದರಿಂದ ಸ್ಫೋಟದ ಪರಿಣಾಮ ಕಡಿಮೆಯಾಗಿದೆ’ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಮನೆಯಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದ್ದು, ಸಿಲಿಂಡರ್ ಸ್ಫೋಟಗೊಳ್ಳುತ್ತಿದ್ದಂತೆ ಇಬ್ಬರೂ ವ್ಯಕ್ತಿಗಳು ಹೊರಗೆ ಓಡಿಹೋಗುವುದನ್ನು ಕಾಣಬಹುದು.
ಪ್ರಾರಂಭದಲ್ಲಿ ಮಹಿಳೆಯೊಬ್ಬಳು ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗುತ್ತಿದ್ದಂತೆ ಆ ಸಿಲಿಂಡರ್‌ನ್ನು ಅಡುಗೆ ಮನೆಯಿಂದ ಹೊರಗೆ ತಂದಿದ್ದಾಳೆ. ಅನಿಲ ಸೋರಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದು ಕೊನೆಗೆ ಮಹಿಳೆ ಸಹಾಯಕ್ಕಾಗಿ ಅತ್ತಿಂದ ಇತ್ತ ಓಡುತ್ತಿರುವುದನ್ನು ಕಾಣಬಹುದು.
@Satyamraj in ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ.ಒಂದೆರಡು ಸೆಕೆಂಡುಗಳ ಬಳಿಕ ಮಹಿಳೆಯೂ ಒಂದು ಬಾಗಿಲಿನಿಂದ ಕೋಣೆಯನ್ನು ಪ್ರವೇಶಿಸಿದರೆ, ಇನ್ನೊರ್ವ ವ್ಯಕ್ತಿ ಇನ್ನೊಂದು ಬಾಗಿಲಿನಿಂದ ಪ್ರವೇಶಿಸಿ ಸಿಲಿಂಡರ್ ಇರುವಲ್ಲಿ ಬರುತ್ತಾನೆ. ಈ ಇಬ್ಬರೂ ಸಿಲಿಂಡರ್‌ನಿಂದ ಅನಿಲ ಸೋರಿಕೆಯನ್ನು ತಡೆಯಲು ಪ್ರಯತ್ನಿಸುವ ವೇಳೆಗೆ ಅಡುಗೆಮನೆಯಿಂದ ಸ್ಫೋಟವೊಂದು ಸಂಭವಿಸಿದ್ದು, ಕೋಣೆಯೇ ಬೆಂಕಿಯಿಂದ ತುಂಬಿಹೋಗಿದೆ. ಈ ವೇಳೆಯಲ್ಲಿ ಈ ಇಬ್ಬರೂ ಮನೆಯಿಂದ ಹೊರಗೆ ಓಡಿ ಹೋಗಿದ್ದು, ಪವಾಡ ಸದೃಶವೆಂಬಂತೆ ಪ್ರಾಣಪಾಯದಿಂದ ಪಾರಾಗಿದ್ದಾರೆ.