ಲೀಡ್ಸ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 471 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಶುಭ್ಮನ್ ಗಿಲ್ ನೇತೃತ್ವದ ಭಾರತ ತಂಡ ಬೃಹತ್ ಮೊತ್ತದ ರನ್ ಗಳಿಕೆ ಕಡೆ ಹೊರಟಿದೆ.
ಮೊದಲ ಇನ್ನಿಂಗ್ಸ್ನಲ್ಲಿ 146 ಬಾಲ್ ಎದುರಿಸಿದ ಪಂತ್ 10 ಬೌಂಡರಿ ಹಾಗೂ 3 ಸಿಕ್ಸರ್ಗಳಿಂದ 100 ರನ್ ಬಾರಿಸಿದರು. ಪಂತ್ ಅವರ ಇನ್ನೊಂದು ವಿಶೇಷತೆ ಎಂದರೆ 99 ರನ್ ಆಗಿದ್ದಾಗ ಸಿಕ್ಸರ್ ಬಾರಿಸಿ 100 ರನ್ಗಳ ಗಡಿ ದಾಟಿದರುಸೆಂಚುರಿ ಬಾರಿಸಿ ಔಟ್ ಆಗಿದ್ದ ನಾಯಕ ಶುಭ್ಮನ್ ಗಿಲ್ ಬಳಿಕ ಕ್ರೀಸ್ಗೆ ಬಂದಿದ್ದ ಕನ್ನಡಿಗ ಕರುಣ್ ನಾಯರ್ ಅವರು ಕೇವಲ ನಾಲ್ಕೇ 4 ಬಾಲ್ ಆಡಿ ಡಕೌಟ್ ಆಗಿ ಹೊರ ನಡೆದರು. ನಾಯಕ ಶುಭ್ಮನ್ ಗಿಲ್ ಒಟ್ಟು 227 ಬಾಲ್ಗಳನ್ನು ಆಡಿ 19 ಬೌಂಡರಿ ಒಂದು ಸಿಕ್ಸರ್ನಿಂದ 147 ರನ್ ಗಳಿಸಿ ಆಡುವಾಗ ಕ್ಯಾಚ್ ಔಟ್ ಆದರು.