newsics.com
ಬೆಂಗಳೂರು: ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ರಸ್ತೆ ಡಾಂಬರೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಏರ್ಪೋರ್ಟ್ ರಸ್ತೆಯನ್ನು ಎರಡು ದಿನ ಬಂದ್ ಮಾಡಲಾಗುವುದು.
ಬುಧವಾರ ರಾತ್ರಿಯಿಂದಲೇ ಹೆಬ್ಬಾಳ ಮೇಲ್ಸೇತುವೆಯ ಒಂದು ಭಾಗ ಮುಚ್ಚಿದ್ದು ಒಟ್ಟು ನಾಲ್ಕು ದಿನಗಳವರೆಗೆ, ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಹೆಬ್ಬಾಳ ಮೇಲ್ಸೇತುವೆಯ ಮೇಲೆ ಡಾಂಬರೀಕರಣದ ಕೆಲಸ ನಡೆಯಲಿದೆ.
ಬೆಂಗಳೂರು ನಗರದ ಕಡೆಗೆ ಮತ್ತು ನಗರದಿಂದ ಬರುವ ಎರಡೂ ಕಡೆಗಳಲ್ಲಿ ಈ ಕೆಲಸವನ್ನು ಮಾಡಲಿದೆ. ಮಳೆಯಿಂದಾಗಿ ಈ ಕೆಲಸದ ವೇಳಾಪಟ್ಟಿಯಲ್ಲಿ ಬದಲಾವಣೆಯೂ ಆಗಬಹುದು. ಆರಂಭದಲ್ಲಿ, ಬೆಂಗಳೂರು ನಗರದ ಕಡೆಗೆ ಬರುವ ಮೇಲ್ಸೇತುವೆಯ ರ‍್ಯಾಂಪ್ ಮುಚ್ಚಲಾಗುತ್ತದೆ. ಎರಡು ದಿನಗಳಲ್ಲಿ ಅದನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.