newsics.com
ಉತ್ತರಪ್ರದೇಶ: ಕಾಣೆಯಾಗಿದ್ದ ಮಗಳು ಶವವಾಗಿ ಸಿಕ್ಕಳು ಎಂದು ರೋಧಿಸುತ್ತಾ ತಂದೆ ತನ್ನ ಮಗಳ ಅಂತ್ಯಸಂಸ್ಕಾರವನ್ನು ನಡೆಸಿದ್ದಾರೆ. ಆದರೆ ಕಾಣೆಯಾದ ಮಗಳು ಆಕೆಯ ಲವರ್ ಜೊತೆ ತಿರುಗಾಡುತ್ತಿರುವುದು ಕಂಡು ತಂದೆಯ ಆಘಾತಕ್ಕೊಳಗಾಗಿದ್ದಾರೆ. ಈ ಘಟನೆ ಉತ್ತರಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ.
ಜೂನ್ 7ರಂದು ಜರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬೀರಾ ಕಚ್ವಾ ಲಿಂಕ್ ರಸ್ತೆಯ ಬಳಿ ಇರುವ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯ ಕೆಳಗೆ ಯುವತಿಯೊಬ್ಬಳ ಶವ ಪತ್ತೆಯಾಗಿತ್ತು. ಇದಾದ ಮರುದಿನ ಮುಸ್ಕಾರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಹುನಿ ಗ್ರಾಮದ ನಿವಾಸಿಯೊಬ್ಬರು ಆ ಹುಡುಗಿಯ ಶವವನ್ನು ತನ್ನ 17 ವರ್ಷ ಪ್ರಾಯದ ಕಾಣೆಯಾದ ಮಗಳ ಶವವೆಂದು ಗುರುತಿಸಿದರು. ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಆ ಹುಡುಗಿಯ ಶವವನ್ನು ಶವ ತನ್ನ ಮಗಳದ್ದು ಎಂದು ಹೇಳಿದ್ದ ವ್ಯಕ್ತಿಗೆ ನೀಡಿದ್ದರು. ನೋವಿನಿಂದ ತಂದೆ ಮಗಳ ಅಂತಿಮ ಸಂಸ್ಕಾರ ನಡೆಸಿದ್ದರು.
ಆದರೆ ಜೂನ್ 17ರಂದು ಆ ಹುಡುಗಿ ತನ್ನ ಪ್ರಿಯಕರನ ಜೊತೆ ಹಾಯಾಗಿ ತಿರುಗಾಡುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ.
ಇತ್ತ ತಂದೆ ದೈಹಿಕ ಹೋಲಿಕೆಯ ಮೇರೆಗೆ ಶವವನ್ನು ತನ್ನ ಮಗಳದ್ದು ಎಂದು ಗುರುತಿಸಿದ್ದಾಗಿ ತಂದೆ ಹೇಳಿದ್ದಾರೆ. ಇತ್ತ ಪೊಲೀಸರು ಪ್ರಿಯಕರನ ಜೊತೆ ತಿರುಗಾಡುತ್ತಿದ್ದ ಯುವತಿಯೂ ಅಪ್ರಾಪ್ತೆಯಾಗಿರುವುದರಿಂದ ವಶಕ್ಕೆ ಪಡೆದಿದ್ದು, ವೈದ್ಯಕೀಯ ಪರೀಕ್ಷೆಗ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.
ಇತ್ತ ಸುಟ್ಟು ಸ್ಥಿತಿಯಲ್ಲಿ ಸಿಕ್ಕ ಶವ ಯಾರದ್ದು ಎಂಬ ಹೊಸ ಚಿಂತೆ ಈಗ ಪೊಲೀಸರನ್ನು ಕಾಡುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.