newsics.com
ಯಾರೇ ನೀ ಮೋಹಿನಿ ಖ್ಯಾತಿಯ ನಟಿ ಐಶ್ವರ್ಯ ಬಸ್ಪುರೆ ವೈವಾಹಿಕ ಜೀವನಕ್ಕೆ ಕಾಲಿಟಿದ್ದಾರೆ.
ಸುನೀಲ್ ಪುರಾಣಿಕ್ ಅವರ ನಿರ್ದೇಶನದ ಮಹಾಸತಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದ ಮೂಲಕ ನಟನೆ ಜರ್ನಿ ಶುರು ಮಾಡ್ತಾರೆ. ನಂತರ ಶ್ರುತಿ ನಾಯ್ಡು ಅವರ ನಿರ್ಮಾಣದ ಯಾರೇ ನೀ ಮೋಹಿನಿ, ಒಲವಿನ ನಿಲ್ದಾಣ, ಮಹಾದೇವಿ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ನಟಿ ಐಶ್ವರ್ಯಾ ಅವರು ಮೂಲತಹ ಧಾರವಾಡದವರು.ಐಶ್ವರ್ಯಾ ಅವರು ರಾಕೇಶ್ ರಾಯ್ ಎಂಬುವವರ ಜೊತೆ ಬೆಂಗಳೂರಿನಲ್ಲಿ ಸಪ್ತಪದಿ ತುಳಿದಿದ್ದಾರೆ. ನಿರ್ಮಾಪಕಿ ಶ್ರುತಿ ನಾಯ್ಡು, ನಟ ಜೇತನ್, ನಟಿ ಸುಷ್ಮಾ ಶೇಖರ್, ಶಿಲ್ಪಾ ಶೈಲೇಶ್, ಸೇರಿದಂತೆ ಹಲವು ಕಿರುತೆರೆಯ ಕಲಾವಿದರು, ಆತ್ಮಿಯರು ಮದುವೆಯಲ್ಲಿ ಭಾಗಿಯಾಗಿದ್ದಾರೆ