newsics.com
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 270ಕ್ಕೂ ಹೆಚ್ಚು ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ದುಬೈನಿಂದ ಜೈಪುರದವರೆಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಹೋಗುತ್ತಿರೋ ನೂರಾರು ಪ್ರಯಾಣಿಕರು ಪ್ರಾಣ ಭಯದಲ್ಲಿ ಪ್ರಯಾಣ ಮಾಡಿದ್ದಾರೆ.
ಏರ್ ಇಂಡಿಯಾ ವಿಮಾನ 1×196 ವಿಮಾನದ ಸಿಬ್ಬಂದಿ ಬೇಜವಬ್ದಾರಿಯಿಂದ ನೂರಾರು ಪ್ರಯಾಣಿಕರು ಪ್ರಾಣ ಭಯದಲ್ಲಿದ್ದಾರೆ. ವಿಮಾನ ಹಾರಾಟ ಆರಂಭಿಸಿ 5 ಗಂಟೆ ಕಳೆದರೂ ಎಸಿ ಆನ್ ಆಗಿಲ್ಲ. ಆಕಾಶದಲ್ಲಿ ಹಾರಾಟ ನಡೆಸುವಾಗ ನೂರಾರು ಪ್ರಯಾಣಿಕರು ಬೆವರಿನಲ್ಲೇ ಮುಳುಗಿದ್ದರು. ಸೆಕೆ ತಾಳಲಾರದೆ ಬುಕ್, ಬಟ್ಟೆಯ ಮೊರೆ ಹೋಗಿದ್ದರು. ಅಷ್ಟೇ ಅಲ್ಲದೇ ಸಹಾಯಕ್ಕೆ ಏರ್ ಇಂಡಿಯಾ ಸಿಬ್ಬಂದಿಯನ್ನು ಕರೆದರು ಅವರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಮಹಿಳೆಯೊಬ್ಬರು ವಿಡಿಯೋ ಮಾಡುವ ಮೂಲಕ ತನ್ನ ಅಳಲನ್ನ ತೋಡಿಕೊಂಡಿದ್ದಾರೆ.
https://www.instagram.com/reel/DK3y4IGT7V0/?igsh=MXVhMmh6ZTFpMmZibg==