newsics.com
ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ರೀಲ್ಸ್ ಮಾಡೋದು ಕಾಮನ್ ಆಗಿ ಬಿಟ್ಟಿದೆ. ಲೈಕ್ಸ್ ಹಾಗೂ ವೀವ್ಸ್ ಗಾಗಿ ಈಗಿನ ಯುವ ಸಮುದಾಯವು ಏನು ಬೇಕಾದರೂ ಸಿದ್ಧವಿದ್ದಾರೆ.ದಿನ ಬೆಳಗಾದರೆ ಸಾಕು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ಹರಿದಾಡುತ್ತಿರುತ್ತವೆ
ಅವುಗಳಲ್ಲಿ ಕೆಲವೊಂದು ದೃಶ್ಯಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಇದೀಗ ಯುವತಿಯೊಬ್ಬಳು ಕುದುರೆಯ ಪಕ್ಕ ನಿಂತು ರೀಲ್ಸ್ ಮಾಡಲು ಹೋಗಿ ಫಜೀತಿಗೆ ಸಿಲುಕಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಫನ್ನಿ ವಿಡಿಯೋವನ್ನು ಅವಿಪ್ಸಾ ಖನಲ್ ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕುದುರೆಯೊಂದು ತನ್ನ ಪಾಡಿಗೆ ನಿಂತು ಹುಲ್ಲು ಮೇಯುತ್ತಾ ನಿಂತಿದ್ದ ಸಂದರ್ಭದಲ್ಲಿ, ಅದರ ಪಕ್ಕವೇ ನಿಂತು ಓರ್ವ ಯುವತಿ ರೀಲ್ಸ್ ಮಾಡಿದ್ದು, ಇದರಿಂದ ಕೋಪಗೊಂಡ ಕುದುರೆ, ಇಲ್ಲಿ ಬಂದು ಏನ್ ನಿನ್ನ ಹುಚ್ಚಾಟ ಎನ್ನುತ್ತಾ ಆಕೆಗೆ ಜಾಡಿಸಿ ಒದ್ದಿದೆ.ಈ ದೃಶ್ಯ ಕಂಡು ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
https://www.instagram.com/reel/DKuDPsgSAWN/?igsh=azNoOGFzcWFtbGJr