newsics.com
ತುಮಕೂರು: ‘ಎಕ್ಕ’ ಚಿತ್ರತಂಡ ತುಮಕೂರಿನ ಸಿದ್ದಗಂಗಾ ಮಠಕ್ಕೆ ಬಂದಿದ್ದ ವೇಳೆ ಬೌನ್ಸರ್ ಇದ್ದ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಬೌನ್ಸರ್ಸ್ ಇದ್ದ ಕಾರು ಮಹಿಳೆಗೆ ಡಿಕ್ಕಿ ಹೊಡೆದು ಕಾಲಿಗೆ ಫ್ಯಾಕ್ಚರ್ ಆಗಿದೆ. ಕಾರ್ ನಲ್ಲಿ ಗುದ್ದಿ ತಿರುಗಿ ನೋಡದೇ ಬೌನ್ಸರ್ಸ್ ಕಾರು ಹೊರಟು ಹೋಗಿದೆ ಕಾಲು ನೋವಿನಿಂದ ಮಹಿಳೆ ಕುಸಿದು ಬಿದ್ದಿದ್ದಾರೆ.
ಮಗನನ್ನ ಶಾಲೆಗೆ ಬಿಟ್ಟು ಹೊಗಲು ಮಹಿಳೆ ಬಂದಿದ್ದರು ಈ ವೇಳೆ ಎಕ್ಕ ಚಿತ್ರದ ತಂಡದ ನಾಯಕ ನಟ-ನಟಿ ಶಿವಕುಮಾರ ಸ್ವಾಮಿಜಿ ಗದ್ದುಗೆಗೆ ಭೇಟಿ ನೀಡಿ ಹೊರಟಾಗ ಅವಘಡ ಸಂಭವಿಸಿದೆ.