newsics.com
ಬೆಂಗಳೂರು: ಬಸ್ ಚಾಲಕ ತನ್ನ ಆಫೀಸ್ ಬಳಿ ಬಸ್ ನಿಲ್ಲಿಸಿಲ್ಲ ಎಂದು ಮಹಿಳೆ ಚಪ್ಪಲಿಯಿಂದ ಬಸ್ ಡ್ರೈವರ್ ನನ್ನು ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಸ್ ಸರ್ಜಾಪುರ ರಸ್ತೆಯ ಕೈಕೊಂಡರಹಳ್ಳಿ ಬಳಿ ತಲುಪಿದಾಗ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಅಮಡುತ್ತಿದ್ದ ಮಹಿಳಾ ಪ್ರಯಾಣಕಿ ಕಾವ್ಯಾ, ಬಸ್ ನಿಲುಗಡೆ ಇಲ್ಲದಿದ್ದರೂ ತನ್ನ ಕಚೇರಿ ಬಳಿ ಬಸ್ ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ ಟ್ರಾಫಿಕ್ ನಿಂದಾಗಿ ಬಸ್ ಚಾಲಕ ಅಲ್ಲಿ ಬಸ್ ನಿಲ್ಲಿಸದೇ ಮುಂದೆ ಹೋಗಿದ್ದಾರೆ. ಇಷ್ಟಕ್ಕೆ ಕಿರುಚಾಡಿ, ಗಲಾಟೆ ಮಾಡಿದ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ತನ್ನ ಚಪ್ಪಲಿ ತೆಗೆದು ಚಾಲಕನಿಗೆ ಹೊಡೆದಿರುವ ಆರೋಪ ಕೇಳಿಬಂದಿದೆ.
ಈ ಬಗ್ಗೆ ಚಾಲಕ ಬೆಳ್ಳಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.