newsics.com
ನಟ ನಂದಮೂರಿ ಬಾಲಕೃಷ್ಣ ತಮ್ಮ 65 ನೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಈ ಸಂದರ್ಭ ಬಾಲಯ್ಯ ಅವರ ಮೀಸೆ ಉದುರಿದ ಪ್ರಸಂಗ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಾಲಯ್ಯ ಅವರು ಇತ್ತೀಚೆಗೆ ತಮ್ಮ 65ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಹೈದರಾಬಾದ್ನ ಬಸವತಾರಕಂ ಆಸ್ಪತ್ರೆಯಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಅವರು ವೇದಿಕೆ ಏರಿ ಮಾತನಾಡಿದರು. ಭಾಷಣ ಮಾಡುವಾಗ ರೋಷದಲ್ಲಿ ಮಾತನಾಡುತ್ತಿದ್ದರು. ಆದರೆ, ಈ ವೇಳೆ ಅವರ ಬಲಭಾಗದ ಮೀಸೆ ಸ್ವಲ್ಪ ಕಳಚಿದೆ. ಇದರಿಂದ ಅವರು ಆತಂಕಗೊಂಡರು. ತಕ್ಷಣ ಚೇತರಿಸಿಕೊಂಡು ಸಿಬ್ಬಂದಿಗೆ ಗಮ್ ನೀಡುವಂತೆ ಕೂಗಿದರು. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ.
https://x.com/WeLoveMegastar/status/1932831377462079892?ref_src=twsrc%5Etfw%7Ctwcamp%5Etweetembed%7Ctwterm%5E1932831377462079892%7Ctwgr%5E2000d6501cfd0b2b297c6e59b60ef9a90822a367%7Ctwcon%5Es1_c10&ref_url=https%3A%2F%2Fm.test.in%2F
Ar India flight ಏರ್ ಇಂಡಿಯಾ ವಿಮಾನ ಪೈಲಟ್ ಎಟಿಸಿಗೆ ಕಳುಹಿಸಿದ್ದ ಕೊನೆಯ ಸಂದೇಶ ಬಯಲು!