newsics.com
ಅಹ್ಮದಾಬಾದ್ ಏರ್ಪೋರ್ಟ್ನಿಂದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಐದು ನಿಮಿಷದಲ್ಲಿ ಮೇಘನಿನಗರ್ ದಲ್ಲಿ ಪತನಗೊಂಡಿದೆ.ವಿಮಾನ ಮೊದಲಿಗೆ ಮೆಡಿಕಲ್ ಕಾಲೇಜುವೊಂದರ ಹಾಸ್ಟೆಲ್ ಗೆ ಅಪ್ಪಳಿಸಿದ್ದು, ಎರಡು ಕಟ್ಟದಳು ಸಂಪೂರ್ಣ ಸುಟ್ಟು ಕರಕಲಾಗಿವೆ
ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಅವರಲ್ಲಿ 230 ಪ್ರಯಾಣಿಕರು, 12 ಮಂದಿ ಸಿಬ್ಬಂದಿಯಿದ್ದರು.
ವಿಮಾನ ಮರಕ್ಕೆ ಡಿಕ್ಕಿ ಹೊಡೆದು ಬಳಿಕ ಬಿ.ಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಗೆ ಅಪ್ಪಳಿಸಿದೆ. ವಿಮಾನ ಅಪ್ಪಳಿಸಿದ ಹೊಡೆತಕ್ಕೆ ಹಾಸ್ಟೆಲ್ ನ ಕ್ಯಾಂಟಿನ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಇದರಿಂದ ಹಲವು ವಿದ್ಯಾರ್ಥಿಗಳು ಮೃತಪಟ್ಟಿರುವುದಾಗಿ ಮಾಹಿತಿ ಹೊರಬಿದ್ದಿದೆ. ಹಲವರ ಸ್ಥಿತಿ ಗಂಭೀರ ಎಂದು ಹೇಳಲಾಗಿದೆ.
https://x.com/ZakirAliTyagi/status/1933097551940710704