newsics. com
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮಾಲೀಕರಾದ ಡಿಯೊಜಿಯೊ ತಂಡವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ.
ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಶಿವಕುಮಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿಸಲಿದ್ದಾರೆ ಎಂಬ ಪೋಸ್ಟ್ಗಳು ಎಕ್ಸ್ ಖಾತೆಯಲ್ಲಿ ಹರಿದಾಡಿವೆ. ಕರ್ನಾಟಕದ ತಂಡಕ್ಕೆ ಕನ್ನಡಿಗರೇ ಮಾಲೀಕರಾದರೆ ಒಳ್ಳೆಯದು, ಡಿಕೆ ಶಿವಕುಮಾರ್ ಪುತ್ರಿ ತಂಡವನ್ನು ಖರೀದಿಸಲಿ ಎಂದು ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದರು.
ಬೆಂಗಳೂರು ರಾಯಲ್ ಚಾಲೆಂಜೆರ್ಸ್ ಸದ್ಯ ಅಮೆರಿಕಾದ ಮೂಲದ ಕಂಪನಿ ಒಡೆತನದಲ್ಲಿದೆ. ಆ ಕಂಪನಿ ಆರ್ ಸಿಬಿ ಸೇಲ್ ಮಾಡುತ್ತಿರುವ ಸುದ್ದಿ ನಿನ್ನೆಯಿಂದ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರ್ ಸಿಬಿ ಕೊಂಡುಕೊಳ್ಳಲಿದ್ದಾರೆ ಎಂಬ ಬಿಸಿ ಚರ್ಚೆ ರಾಜಕೀಯ ಪಡಸಾಲೆಗಳಲ್ಲಿ ಹರಿದಾಡಿತ್ತು. ಇದಕ್ಕೆ ಸ್ವತಃ ಡಿಕೆ ಉತ್ತರ ಕೊಟ್ಟಿದ್ದಾರೆ.
ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್,”ನಾನು ಹುಚ್ಚನಲ್ಲ. ನಾನು ಚಿಕ್ಕಂದಿನಿಂದಲೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ನ ಸದಸ್ಯ, ಅಷ್ಟೇ. ನನಗೆ ಸಮಯವಿಲ್ಲ, ಆದರೂ ನಿರ್ವಹಣೆಯ ಭಾಗವಾಗಲು ನನಗೆ ಆಫರ್ಗಳು ಬಂದವು… ನನಗೆ ಆರ್ಸಿಬಿ ಏಕೆ ಬೇಕು? ನಾನು ರಾಯಲ್ ಚಾಲೆಂಜ್ ಕುಡಿಯುವುದೇ ಇಲ್ಲ” ಆರ್ಸಿಬಿ ಫ್ರಾಂಚೈಸಿಯನ್ನು ಖರೀದಿಸುವ ವದಂತಿಗಳನ್ನು ನಿರಾಕರಿಸಿದ್ದಾರೆ.
https://x.com/ANI/status/1932722377487708435?ref_src=twsrc%5Etfw%7Ctwcamp%5Etweetembed%7Ctwterm%5E1932722377487708435%7Ctwgr%5E931e01559b9c9317c26e49ee47f87ec365dd1604%7Ctwcon%5Es1_c10&ref_url=https%3A%2F%2Fm.test.in%2F
Darling Krishna ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬಕ್ಕೆ ಬ್ರ್ಯಾಟ್ ಚಿತ್ರದ ಟೀಸರ್ ಬಿಡುಗಡೆ