ತೆಲುಗು ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಅಕ್ಕಿನೇನಿ ನಾಗಾರ್ಜುನ ಅವರ ಎರಡನೇ ಪುತ್ರ ಅಖಿಲ್ ಅಕ್ಕಿನೇನಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬ್ಯಾಚುಲರ್ ಲೈಫ್ಗೆ ವಿದಾಯ ಹೇಳಿ, ಗೆಳತಿ ಝೈನಾಬ್ ರಾವಡ್ಜಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಗಿನ ಜಾವ 3 ಗಂಟೆಗೆ ಜುಬಿಲಿ ಹಿಲ್ಸ್‌ನಲ್ಲಿರುವ ನಾಗಾರ್ಜುನ ಅವರ ನಿವಾಸದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ.
ಅಖಿಲ್ ಅಕ್ಕಿನೇನಿಯನ್ನು ಮದುವೆಯಾಗಿರೋ ಹುಡುಗಿ ಹೆಸರು ಝೈನಾಬ್ ರಾವಡ್ಜಿ. ಈ ಹಿಂದೆ ಅಖಿಲ್ ಅಕ್ಕಿನೇನಿ ಅವರು ಝೈನಾಬ್ ರಾವಡ್ಜಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಬಗ್ಗೆ ಖುದ್ದು ನಾಗಾರ್ಜುನ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದರು.