newsics.com
ಮಂಗಳೂರು: ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಹೆಸರಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡನಿಗೆ ಜೀವ ಬೆದರಿಕೆ ಹಾಕಲಾಗಿದೆ.
ಉರ್ದು ಭಾಷೆಯಲ್ಲಿ ವಾಟ್ಸಾಪ್ ಮೂಲಕ ಆಡಿಯೋ ಮೆಸೇಜ್ ಕಳುಹಿಸಲಾಗಿದೆ. ಹಿಂದೂ ಜಾಗರಣ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ನರಸಿಂಹ ಮಾಣಿ ಅವರಿಗೆ ಬೆದರಿಕೆ ಹಾಕಲಾಗಿದೆ.
ಹಲವು ಹಿಂದೂ ಮುಖಂಡರ ಪಟ್ಟಿ ಸಿದ್ಧ ಮಾಡಿದ್ದೇವೆ. ನಿನ್ನ (ನರಸಿಂಹ ಮಾಣಿ) ಹೆಸರು ಲಿಸ್ಟ್ ನಲ್ಲಿ ಮೊದಲಿಗಿದೆ. ನಿನ್ನ ಎಲ್ಲಾ ಚಲನವಲನಗಳನ್ನು ಗಮನಿಸುತ್ತಿದ್ದೇವೆ. ಕೊಲೆಯಾದ ಸುಹಾಸ್ ಶೆಟ್ಟಿ ಕೂಡಾ ನಮ್ಮ ಪಟ್ಟಿಯಲ್ಲಿದ್ದ. ಆದರೆ, ಯಾರೋ ಒಳ್ಳೆಯ ಜನ ಅವನನ್ನು ಕೊಂದುಹಾಕಿದ್ದಾರೆ. ನಿನ್ನ ಸ್ನೇಹಿತ ರಂಜಿತ್ ಎಂಬವನನ್ನು ಕೊಲ್ಲುತ್ತೇವೆ. ತಲೆ ಕಡಿದು ಸುಲಭವಾಗಿ ಕೊಲ್ಲುವುದಿಲ್ಲ. ಮೊದಲು ಆತನ ಕೈ ಕಾಲು ಕಡಿಯುತ್ತೇವೆ. ನಂತರ ತಲೆ ಕಡಿದು ದೆಹಲಿಯ ಮೈನ್ ಗೇಟ್ನಲ್ಲಿ ನೇತು ಹಾಕುತ್ತೇವೆ. ನಾವು ದೆಹಲಿಗೆ ಬಂದು ತಲುಪಿಯಾಗಿದೆ. ನಿಮ್ಮ ಉಲ್ಟಾ ಲೆಕ್ಕಾಚಾರ ಸ್ಟಾರ್ಟ್ ಆಗಿದೆ’ ಎಂದು ಉಗ್ರರ ಹೆಸರಿನಲ್ಲಿ ಬಂದ ಸಂದೇಶದಲ್ಲಿದೆ.
ಬೆದರಿಕೆ ಸಂದೇಶ ಪಾಕಿಸ್ತಾನ, ಅಫ್ಘಾನಿಸ್ತಾನ, ಸೌದಿ ಅರೇಬಿಯಾ ಮೊಬೈಲ್ ಸಂಖ್ಯೆಯಿಂದ ಬಂದಿದೆ. ಬೆದರಿಕೆ ಸಂದೇಶದ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಿಗೆ ದೂರು ದಾಖಲಿಸಲಾಗಿದೆ. ‘