Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Reminiscence of HSV ಪ್ರೀತಿಯ ಕವಿ HSVಗೆ ಭಾವಪೂರ್ಣ ವಿದಾಯ
ಅನಾವರಣಕರ್ನಾಟಕಪ್ರಮುಖಮನರಂಜನೆ

Reminiscence of HSV ಪ್ರೀತಿಯ ಕವಿ HSVಗೆ ಭಾವಪೂರ್ಣ ವಿದಾಯ

Share
2 Min Read
SHARE

newsics.com

70-80ರ ದಶಕ ಕನ್ನಡ ನಾಡಿನ ಸುವರ್ಣ ಯುಗ. ಕವಿಯ ಕವಿತೆಗಳು ಮನೆ ಮನೆಗೆ ತಲುಪಿದ ಸಮಯವದು. ಕುವೆಂಪು, ಬೇಂದ್ರೆ, ಅಡಿಗ, ನರಸಿಂಹ ಸ್ವಾಮಿ, ಶಿವರುದ್ರಪ್ಪ, ಪುತಿನ, ಲಕ್ಷ್ಮೀ ನಾರಾಯಣ ಭಟ್ಟ, ನಿಸಾರರ ಕಲ್ಪನೆಯ ಸಾಲುಗಳು ಹಾಡಾಗಿ ಕನ್ನಡಿಗರ ಎದೆಯ ಬಡಿದ ಕಾಲಮಾನ.

ಕವಿಯ ಭಾವನೆಗಳು ಹಾಡಾಗಿ ಕೇಳುಗನ ಎದೆಯಲ್ಲಿ ಗುನುಗಿ ನಾಲಿಗೆ ಮೇಲೆ ನಲಿದರೆ ಕವಿ- ಕೇಳುಗನಿಗದೇ ಧನ್ಯತೆ. ಬೇರೆಲ್ಲೂ ಅಷ್ಟಾಗಿ ಕಾಣಸಿಗದ ಸುಗಮ ಸಂಗೀತ ಪರಂಪರೆ ಕನ್ನಡ ನಾಡಿನಲ್ಲಿ ಬೆಳೆದು ಜನಪ್ರಿಯವಾದ ಪರಿ ಅಚ್ಚರಿ ಎನಿಸುವಷ್ಟು ದಟ್ಟ! ಅದೇ ಆ ಸುವರ್ಣ ಯುಗವನ್ನು ಇಂದಿಗೂ ಬೆಸೆಯುವ ಕೊಂಡಿಯಾಗಿದ್ದವರು ನಮ್ಮ ಪ್ರೀತಿಯ ಕವಿ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ (HSV)…

ಮನಕೆ ಎಟುಕದೆ ಹೋದ ಅದೆಷ್ಟೋ ಸಾಹಿತ್ಯದ ರಾಶಿಗಳಲಿ ಪ್ರೀತಿಯಿಂದ ಅಪ್ಪಿ ಎತ್ತಿಹಿಡಿವ ಸಾಹಿತ್ಯದ ಸಾಲಿನ ದೀಪ ಹಚ್ಚಿದವರು HSV.

ಸಾವಿರ ದಳ ಕಮಲಿನಿ ಓ ಭಾರತಿ… ಈ ಸಾಲುಗಳು ಎದೆಯಲ್ಲಿ ದೇಶಭಕ್ತಿಯ ಕಿಚ್ಚು ಹತ್ತಿಸುವುದಿಲ್ಲವೇ? ಇರಬೇಕು ಇರುವಂತೆ …. ತೊರೆದು ಸಾವಿರ ಚಿಂತೆ … ಮಳೆ ಸುರಿಸಿ ಹಗುರಾದ ಮುಗಿಲಿನಂತೆ… ಸಾಲು ಕೇಳಿದಾಕ್ಷಣ ಮನಸ್ಸು ಹಗುರವಾಗುವುದಿಲ್ಲವೆ?

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ …. ಅರಿತೆವೇನು ನಾವು ನಮ್ಮ ಅಂತರಾಳವ?… ಎಂಬ ಸಾಲು ಕೇಳಿದಾಗ ಆಂತರ್ಯದ ಪೊಳ್ಳುತನಕ್ಕೊಂದು ಪ್ರಶ್ನೆ ಕಾಡುವುದಿಲ್ಲವೇ?

ಒಬ್ಬ ಸೃಜನಶೀಲ ಕವಿ ನೋವಿನ ಜಾಡನ್ನು ಅರಸುತ್ತಾ ಹೋದರೆ ಇಂತಹ ಮನೋಜ್ಞ ಸಾಲುಗಳು ಹುಟ್ಟುತ್ತಲೇ ಇರುತ್ತವೆ ಎಂಬುದಕ್ಕೆ HSV ಜೀವಂತ ನಿದರ್ಶನ.

ಕನ್ನಡ ಕಾವ್ಯ ಪರಂಪರೆಯಲ್ಲಿ ಕೃಷ್ಣ ಭಾವದಲ್ಲಿ ಮತ್ತೆ ಮತ್ತೆ ಮುಳುಗಿ ತೇಲುತ್ತಿರುವ ಕವಿ ಎಂದರೆ ನಿಸ್ಸಂಶಯವಾಗಿ ಅದು HSV.

ಕೃಷ್ಣನನ್ನು ದೇವನಾಗಿ ನೋಡದೆ ಪ್ರೀತಿಯ ಸಖನಾಗಿ, ವಿರಹದಿ ಕಾಡುವ ಪ್ರಿಯತಮನಾಗಿ, ದಾರಿ ತೋರಿದ ಗೆಳೆಯನಾಗಿ, ಬೆನ್ನಿಗೆ ನಿಂತ ಮಿತ್ರನಾಗಿ HSV ಭಾವಿಸಿ ತಮ್ಮ ಕವನಗಳಲ್ಲಿ ಕೃಷ್ಣನನ್ನು ಕಟ್ಟಿಕೊಟ್ಟ ರೀತಿ ಬಲು ಅನನ್ಯ . ಅಮ್ಮ ನಾನು ದೇವರಾಣೆ, “ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು, ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ, ಲೋಕದ ಕಣ್ಣಿಗೆ ರಾಧೆಯು ಕೂಡ…, ಮಧುರೆಗೆ ಹೋದನು ಮಾಧವ… ಹೀಗೆ ಹತ್ತು ಹಲವು ಕೃಷ್ಣನ ಕುರಿತಾದ ಹಾಡುಗಳನ್ನು ಭಾವಗೀತೆಯನ್ನು ಪ್ರೀತಿಸುವ ಕನ್ನಡಿಗರಿಗೆ ಕೊರತೆ ಇದೆಯೇ?

ವೆಂಕಟೇಶ ಮೂರ್ತಿಯವರು ತಲೆ ಓಡಿಸಿ ಸಾಹಿತ್ಯ ಬರೆದವರಲ್ಲ. ಹೃದಯದ ಬೆಚ್ಚನೆಯ ಜೀವನ ಪ್ರೀತಿಯಲ್ಲಿ ಕವಿಯಾದರು. ಹಾಗಾಗಿ ಅವರ ಕವಿತೆಗಳು ಬರಿಯ ಪದಪುಂಜಗಳಲ್ಲ, ಅವು ಸಾಂತ್ವನದ ಸೆಲೆಗಳು!

HSVಯವರು ದೀರ್ಘ ಕಾಲದ ಅನಾರೋಗ್ಯದ ನರಳಾಟಕ್ಕೆ ಮುಕ್ತಾಯ ಬರೆದಿದ್ದಾರೆ. 80 ದಾಟಿದ ವ್ಯಕ್ತಿ ಮನಸ್ಸಿನಿಂದ ಮಾಗುವುದು ಒಬ್ಬ ಸೃಜನಶೀಲ ವ್ಯಕ್ತಿಯ ಸಹಜ ಗುಣ. ಅಂದು ಕೃಷ್ಣ ರಾಧೆಯ ಸರಸದ ಕಚಗುಳಿಯ ಕವಿತೆಯಿಂದ ಬುದ್ಧಚರಣದಂತಹ ವೈರಾಗ್ಯಮೂರ್ತಿಯ ಮಹಾಕಾವ್ಯ ಬರೆದು ನಿರಂತರ ಜೀವನ ಪ್ರೀತಿ ಮೆರೆದಿದ್ದಾರೆ.

ಅವರದೇ ಜನಪ್ರಿಯ ಸಾಲುಗಳು… ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ… ಬೇವಾಗಿವ ಸವಿಗಾನದ ಹಕ್ಕಿ ಹಾಡಿ ಹಾಡಿ ಮುಕ್ತ ಮುಕ್ತ…

TAGGED:A heartfelt farewell to beloved poet HSV
Share This Article
Facebook Twitter Copy Link Print
Previous Article H.S. Venkatesh Murthy passes away ಖ್ಯಾತ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ವಿಧಿವಶ
Next Article ರಾಜ್ಯದಲ್ಲಿ ಮಳೆಗೆ ಮತ್ತೊಂದು ಬಲಿ;ಕಾಂಪೌಂಡ್ ಕುಸಿದು ಬಾಲಕಿ ಸಾವು

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?