newsics.com
ನವದೆಹಲಿ: ಲೋಗೋ ರಿಲೀಸ್ ಮಾಡಿ, ಆ ಲೋಗೋ ಅರ್ಥವಾಗುವಷ್ಟರಲ್ಲಿ, ಪಾಕಿಸ್ತಾನದಲ್ಲಿ ವಿಧ್ವಂಸ ಸೃಷ್ಟಿಸಿದ್ದು ಆಪರೇಷನ್ ‘ಸಿಂಧೂರ’.
ಪಾಕಿಸ್ತಾನವಂತೂ ಈ ಲೋಗೋ ಅರ್ಥ ತಿಳಿಯೋಕೆ ಗೂಗಲ್ನಲ್ಲೆಲ್ಲಾ ಹುಡುಕಾಡಿತ್ತು. . ಅಷ್ಟಕ್ಕೂ ಇಷ್ಟೊಂದು ಕುತೂಹಲ ಮೂಡಿಸಿದ ಈ ಆಪರೇಷನ್ ಸಿಂಧೂರ್ ಲೋಗೋವನ್ನ ಕ್ರಿಯೇಟ್ ಮಾಡಿದ್ದು ಯಾವುದೋ ಜಾಹೀರಾತು ಕಂಪನಿಯಂತೂ ಅಲ್ಲ.
ಆಪರೇಷನ್ ಸಿಂದೂರ್ ಲೋಗೋವನ್ನು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಹರ್ಷ್ ಗುಪ್ತಾ ಮತ್ತು ಹವಾಲ್ದಾರ್ ಸುರೀಂದರ್ ಸಿಂಗ್ ರಚಿಸಿದ್ದರು. ಆಪರೇಷನ್ ಸಿಂದೂರ್ ಲೋಗೋ ಕಾರ್ಯಾಚರಣೆಯ ಹೆಸರನ್ನು ದಪ್ಪನೆಯ ಬ್ಲಾಕ್ ಲೆಟರ್‌ನಲ್ಲಿ ಬರೆಯಲಾಗಿತ್ತು. ಇನ್ನೂ ಸಿಂದೂರ್‌ನ ಎರಡು ‘O’ ಅಕ್ಷರಗಳನ್ನು ಸಿಂದೂರದ ಡಬ್ಬಿಯ ರೀತಿಯಲ್ಲಿ ಚಿತ್ರಿಸಲಾಗಿತ್ತು. ಚೆಲ್ಲಿದ ಸಿಂಧೂರವು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡ ವಿಧವೆ ಮಹಿಳೆಯರನ್ನು ಪ್ರತಿನಿಧಿಸುತ್ತದೆ . ಸಾಂಪ್ರದಾಯಿಕವಾಗಿ ವೈವಾಹಿಕ ಸ್ಥಿತಿಯ ಸಂಕೇತವಾಗಿ ಹಿಂದೂ ಮಹಿಳೆಯರು ಸಿಂದೂರವನ್ನು ಧರಿಸುತ್ತಾರೆ. ಚೆಲ್ಲಿದ ಸಿಂದೂರದ ಅರ್ಥ ಅವರನ್ನು ವಿಧವೆಯರನ್ನಾಗಿ ಮಾಡಿದ ಭಯೋತ್ಪಾದಕ ದಾಳಿಯ ಮೇಲಿನ ಸಿಟ್ಟನ್ನು ಪ್ರತಿಧ್ವನಿಸಿತ್ತು.