Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Karnataka Rains: ಮಳೆ ಆರ್ಭಟಕ್ಕೆ ಕರ್ನಾಟಕದಲ್ಲಿ 8 ಮಂದಿ ಸಾವು
ಕರ್ನಾಟಕಪ್ರಮುಖ

Karnataka Rains: ಮಳೆ ಆರ್ಭಟಕ್ಕೆ ಕರ್ನಾಟಕದಲ್ಲಿ 8 ಮಂದಿ ಸಾವು

Share
1 Min Read
SHARE

newsics.com

ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಮಳೆ ಸಂಬಂಧಿತ ಅವಘಡಗಳು ಹಲವರನ್ನು ಬಲಿ ಪಡೆದಿವೆ. ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 8 ಮಂದಿ ಮೃತಪಟ್ಟಿದ್ದಾರೆ.

ಬೆಳಗಾವಿ ಅ ಜಿಲ್ಲೆ ಅಥಣಿ ತಾಲೂಕಿನ ನಾಗನೂರ ಪಿಎ ಗ್ರಾಮದ ಗಣೇಶ್ ಕಾಂಬಳೆ ಎಂಬ 9 ವರ್ಷದ ಬಾಲಕ ಹಾಗೂ ದೀಪಕ್ ಕಾಂಬಳೆ ಎಂಬ 11 ವರ್ಷದ ಬಾಲಕ ಎತ್ತಿನಗಾಡಿಯಲ್ಲಿ ತೆರಳುತ್ತಿದ್ದರು.

ನಿರಂತರ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿದ್ದು, ಹಳ್ಳದಲ್ಲಿ ದಾರಿ ಕಾಣದೇ ಎತ್ತಿನ ಬಂಡಿ ಮಗುಚಿಬಿದ್ದಿದೆ. ಪರಿಣಾಮವಾಗಿ ಮಕ್ಕಳಿಬ್ಬರು ಮೃತಪಟ್ಟಿದ್ದು, ಒಂದು ಎತ್ತು ಕೂಡ ಸಾವನ್ನಪ್ಪಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಿರವಾಡಿ ಗ್ರಾಮದಲ್ಲಿ ನಿರಂತರ ಮಳೆಯಿಂದ ಮನೆ ಗೋಡೆ ಕುಸಿದು ಶಾಂತಮ್ಮ ತಳವಾರ ಎಂಬವರು ಮೃತಪಟ್ಟಿದ್ದಾರೆ . ಕಂದಾಯ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಬ್ಯಾಡಗಿ ತಾಲೂಕಿನ ಶಿಡೇನೂರು ಬಳಿ ಗಾಳಿಯಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ವಿದ್ಯುತ್‌ ಸ್ಪರ್ಶದಿಂದ ಜಮೀನಿನಲ್ಲಿದ್ದ ರೈತ ಬಾಬುಲಾಲ್ ಬ್ಯಾಡಗಿ ಅಸುನೀಗಿದ್ದಾರೆ. ಹಾನಗಲ್ ತಾಲೂಕಿನ ಕೂಡಲ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಶಶಾಂಕಗೌಡ ಮುದ್ದಿನಗೌಡ ಎಂಬ ಬಾಲಕ ಇಹಲೋಕ ತ್ಯಜಿಸಿದ್ದಾನೆ. ಪಂಪ್‌ಸೆಟ್‌ ಮೋಟರ್ ಆನ್‌ ಮಾಡಲು ಹೋದಾಗ ದುರಂತ ಸಂಭವಿಸಿದೆ.

ಇತ್ತ ದೊಡ್ಡಬಳ್ಳಾಪುರ ತಾಲೂಕಿನ ಕಂಗಳಾಪುರದಲ್ಲಿ ಟ್ರಾನ್ಸ್ಫಾರ್ಮರ್ ರಿಪೇರಿ ಮಾಡುವಾಗ ಕರೆಂಟ್ ಶಾಕ್ ಹೊಡೆದು ರಂಗಪ್ಪ ಎಂಬವರು ಸಾವಿಗೀಡಾಗಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದಲ್ಲಿ ಮನೆ ಬಳಿ ಕೆಲಸ ಮಾಡುತ್ತಿದ್ದಾಗ ಮರದ ಕೊಂಬೆ ಬಿದ್ದು ವಿಷ್ಣು ಬೆಳ್ಯಪ್ಪ ಎಂಬವರು ಮೃತಪಟ್ಟಿದ್ದಾರೆ.

ಮಳೆ ಹೆಚ್ಚಾಗುತ್ತಿದ್ದಂತೆಯೇ ನದಿಗಳ ಅಬ್ಬರ ಕೂಡಾ ಹೆಚ್ಚಾಗಿದೆ. ಈ ಮಧ್ಯೆ, ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ನಾಲ್ವರ ಪೈಕಿ ಓರ್ವ ವಿದ್ಯಾರ್ಥಿ ನಾಪತ್ತೆ ಆಗಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದೆ.

ಮಳೆಯಿಂದ ದಾರಿ ಕಾಣದೇ ಮುಗುಚಿ ಬಿದ್ದ ಎತ್ತಿನ ಗಾಡಿ – ಇಬ್ಬರು ಮಕ್ಕಳು, ಎತ್ತು ಸಾವು

TAGGED:Karnataka Rains: 8 people died in Karnataka due to heavy rains
Share This Article
Facebook Twitter Copy Link Print
Previous Article open romance car ಕಾರಿನ ಸನ್‌ರೂಫ್‌ನಲ್ಲೇ ಯುವ ಜೋಡಿಯ ಬಹಿರಂಗ ರೊಮ್ಯಾನ್ಸ್! ಕಂಡವರೆಲ್ಲ ಕಕ್ಕಾಬಿಕ್ಕಿ, ವೈರಲ್ ವಿಡಿಯೋ ನೋಡಿ
Next Article Rain alerts ಮಳೆಯಿಂದ ಕಾರುಗಳಿಗೆ ಹಾನಿ: ಅರ್ಧ ರೇಟ್ಗೆ ಮಾರಾಟ ಮಾಡುತ್ತಿರುವ ಮಾಲೀಕರು

Popular Posts

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read

You Might Also Like

ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಕರ್ನಾಟಕ

9 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ; ಚೈತ್ರಾ ಕುಂದಾಪುರ ಭಾವುಕ ಪೋಸ್ಟ್

1 Min Read
ಪ್ರಮುಖಮನರಂಜನೆ

Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?