Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Rain alerts ಮಳೆಯಿಂದ ಕಾರುಗಳಿಗೆ ಹಾನಿ: ಅರ್ಧ ರೇಟ್ಗೆ ಮಾರಾಟ ಮಾಡುತ್ತಿರುವ ಮಾಲೀಕರು
ಕರ್ನಾಟಕಪ್ರಮುಖ

Rain alerts ಮಳೆಯಿಂದ ಕಾರುಗಳಿಗೆ ಹಾನಿ: ಅರ್ಧ ರೇಟ್ಗೆ ಮಾರಾಟ ಮಾಡುತ್ತಿರುವ ಮಾಲೀಕರು

Share
2 Min Read
SHARE

newsics.com

ಬೆಂಗಳೂರಿನಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ, ಎರಡು ದಿನಗಳ ಹಿಂದೆ ಸುರಿದ ಮಳೆ ಮಹಾನಗರ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿತ್ತು.

ರಸ್ತೆಗಳ ಮೇಲೆ ನೀರು ನಿಂತಿತ್ತು. ವಾಹನ ಸವಾರರು ಪರದಾಡಿದ್ದರು. ಮನೆಯೊಳಗೆ ನೀರು ನುಗ್ಗಿತ್ತು. ಮನೆಗಳ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿದ್ದವು. ವಾಹನಗಳಿಗೆ ಹಾನಿಯಗಿದ್ದು, ಮಾಲೀಕರಿಗೆ ಸಾಕಷ್ಟು ನಷ್ಟವಾಗಿದೆ. ಇದರಿಂದ ವಾಹನಗಳು ತಮ್ಮ ಅಸಲಿ ಮೌಲ್ಯವನ್ನು ಕಳೆದುಕೊಂಡಿವೆ. ಹೀಗಾಗಿ, ಮಾಲೀಕರು ತಮ್ಮ ಕಾರುಗಳನ್ನು ಅರ್ಧ ರೇಟ್ಗೆ ಮಾರಲು ಮುಂದಾಗಿದ್ದಾರೆ.

ಕಳೆದ ವರ್ಷ ವರುಣಾರ್ಭಟಕ್ಕೆ ಯಲಹಂಕದ ಕೇಂದ್ರಿಯ ಅಪಾರ್ಟ್ಮೆಂಟ್ ಅಕ್ಷರಶಃ ನಲುಗಿ ಹೋಗಿತ್ತು. 2500 ಜನರನ್ನು ಅಪಾರ್ಟ್ಮೆಂಟ್ನಿಂದ ಶಿಫ್ಟ್ ಮಾಡಲಾಗಿತ್ತು. 300ಕ್ಕೂ ಅಧಿಕ ಕಾರುಗಳು ಮುಳುಗಡೆಯಾಗಿದ್ದವು. ಹೀಗೆ ಮುಳುಗಡೆಯಾಗಿ ಕೆಟ್ಟು ಹೋದ ಕಾರುಗಳಿಗೆ ವಿಮೆ ಕೂಡ ಕ್ಲೈಂ ಆಗಲ್ವಂತೆ.

ಉದಯ ಎಂಬುವರ ಹನ್ನೆರಡುವರೆ ಲಕ್ಷ ಮೌಲ್ಯದ ಬೊಲೆರೊ ಕಂಪನಿಯ ಕಾರು ನೀರಲ್ಲಿ ಮುಳುಗಿತ್ತು. ಇದರಿಂದ ಕಾರಿಗೆ ಸಾಕಷ್ಟು ಹಾನಿಯಾದ ಕಾರಣ ಉದಯ ಅವರು ಅದನ್ನು 6.80 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಇನ್ನು, 10 ಸಾವಿರ ಕಿಮಿ ಓಡಿದ್ದ ಮಾರುತಿ ಝನ್ ಕಾರನ್ನು ಕೃಷ್ಣ ಎಂಬುವರು 70 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. 18-20 ಲಕ್ಷ ರೂ. ಮೌಲ್ಯದ ಹೋಂಡಾ ಸಿಟಿ ಕಾರು ಮಳೆ ನೀರಲ್ಲಿ ಮುಳುಗಡೆಯಾದ ಕಾರಣ, ಮಾಲೀಕ ಸುನಿಲ್ ಅವರು ಅನಿವಾರ್ಯವಾಗಿ 7 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ‌.

ಮೊನ್ನೆ ಸುರಿದ ಮುಂಗಾರು ಮಳೆಗೆ ಸಾಯಿ ಲೇಔಟ್, ಕೋರಮಂಗಲ, ಬಿಟಿಎಂ ಲೇಔಟ್, ಹೆಚ್ ಬಿ ಆರ್ ಲೇಔಟ್ ಅಪಾರ್ಟ್ಮೆಂಟ್ಗಳಲ್ಲಿ ಪಾರ್ಕ್ ಮಾಡಿದ್ದ ಕಾರುಗಳು ಮುಳುಗಡೆಯಾಗಿದ್ದವು. ಅಪಾರ್ಟ್ಮೆಂಟ್ ಬೇಸ್ಮೆಂಟ್ ಮತ್ತು ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳಿಗೆ ಜಲದಿಗ್ಭಂಧನ ಎದುರಾಗಿತ್ತು‌. ಇದೀಗ, ಅಂತಹ ಕಾರುಗಳನ್ನು ಕೂಡ ಕೆಲ ಮಾಲೀಕರು ಅರ್ಧ ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದಾರೆ.

ಒಟ್ಟಿನಲ್ಲಿ ಪ್ರತಿ ವರ್ಷ ಮಳೆ ಬಂದಾಗಲೂ ಬೆಂಗಳೂರಿನ ಜನರಿಗೆ ಒಂದಲ್ಲಾ ಒಂದು ಸಂಕಷ್ಟು ಎದುರಾಗುತ್ತವೆ. ಮಳೆಯಿಂದ ಆಗುತ್ತಿರುವ ತೊಂದರೆಗಳನ್ನು ಶಾಶ್ವತವಾಗಿ ತಡೆಯಿರಿ ಎಂದು ಜನರು ಅದೆಷ್ಟು ಬಾರಿ ಮನವಿ ಮಾಡಿಕೊಂಡರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಇನ್ನೂವರೆಗೂ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ.

Karnataka Rains: ಮಳೆ ಆರ್ಭಟಕ್ಕೆ ಕರ್ನಾಟಕದಲ್ಲಿ 8 ಮಂದಿ ಸಾವು

TAGGED:Rain damages cars in Bengaluru: Owners selling them at half price
Share This Article
Facebook Twitter Copy Link Print
Previous Article Karnataka Rains: ಮಳೆ ಆರ್ಭಟಕ್ಕೆ ಕರ್ನಾಟಕದಲ್ಲಿ 8 ಮಂದಿ ಸಾವು
Next Article Money ಬೆಳಿಗ್ಗೆ ಎದ್ದ ತಕ್ಷಣ ಈ 2 ವಸ್ತುಗಳನ್ನು ಮುಟ್ಟಿದರೆ ನಿಮ್ಮ ಕೈಯಲ್ಲಿ ಹಣ ಉಳಿಯುತ್ತದೆಯಂತೆ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?