newsics.com
ಮುಸ್ಲಿಂ ಸಮುದಾಯದ ಗುತ್ತಿಗೆದಾರರಿಗೆ ಸರ್ಕಾರಿ ಗುತ್ತಿಗೆಯಲ್ಲಿ ಶೇ 4ರಷ್ಟು ಮೀಸಲಾತಿ ಒದಗಿಸುವ ತಿದ್ದುಪಡಿ ಮಸೂದೆಯನ್ನು ಕರ್ನಾಟಕ ಸರ್ಕಾರವು ರಾಜ್ಯಪಾಲರಿಗೆ ಮರುಸಲ್ಲಿಸಿತ್ತು. ಮೊದಲ ಬಾರಿಗೆ ರಾಜ್ಯಪಾಲರು ಸ್ಪಷ್ಟೀಕರಣ ಕೋರಿ ಮಸೂದೆಯನ್ನು ಅನುಮೋದಿಸಿರಲಿಲ್ಲ. ಆದರೇ 2ನೇ ಬಾರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಕಿತ ನೀಡದೇ ವಾಪಾಸ್ ಕಳುಹಿಸಿದ್ದಾರೆ.
ರಾಜ್ಯ ಸರ್ಕಾರ ಕಳುಹಿಸಿದ್ದಂತ ವಿಧೇಯಕ ಮತ್ತೆ ರಾಜ್ಯಪಾಲರು ಹಿಂದಿರುಗಿಸಿದ್ದಾರೆ. ರಾಜ್ಯಪಾಲರು ಸರ್ಕಾರಿ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುವಂತ ಮಸೂದೆಯನ್ನು ವಾಪಾಸ್ ಕಳುಹಿಸಿದ್ದರು. ಆ ಬಳಿಕ ಸ್ಪಷ್ಟೀಕರಣದೊಂದಿಗೆ ವಿಧೇಯಕ ಮರು ಸಲ್ಲಿಕೆ ಮಾಡಲಾಗಿತ್ತು.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಮಸೂದೆ, 2025 ರ ಮೀಸಲಾತಿಯ ನಿರ್ಧಾರವನ್ನು ಭಾರತದ
ಗೌರವಾನ್ವಿತ ರಾಷ್ಟ್ರಪತಿಗಳ ದಯೆಯಿಂದ
ಪರಿಗಣಿಸಲು ನಾನು ಮರುಪರಿಶೀಲಿಸಬಾರದು. 15- 04-2025 ರಂದು ನಿರ್ದೇಶಿಸಿದಂತೆ ಮುಂದಿನ ಅಗತ್ಯ ಕ್ರಮಕ್ಕಾಗಿ ಸರ್ಕಾರಿ ಕಡತವನ್ನು ಹಿಂತಿರುಗಿಸಿ ಎಂದು ಆದೇಶದಲ್ಲಿ ತಿಳಿಸಲಾಗಿದೆ.