newsics.com
ಬಿಹಾರ: ಮದುವೆಯಲ್ಲಿ ಮನರಂಜನೆ ನೀಡಲೆಂದು ಕರೆಸಲಾಗಿದ್ದ ನೃತ್ಯಗಾರರೂ, ವರನನ್ನೇ ಮಂಟಪದಿಂದ ಅಪಹರಿಸಿರುವ ಘಟನೆ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ನೃತ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಯಾವುದೋ ವಿಚಾರಕ್ಕೆ ವಿವಾದ ಶುರುವಾಗಿತ್ತು, ಅದು ಹಿಂಸಾತ್ಮಕ ಘರ್ಷಣೆಯಾಗಿ ಮಾರ್ಪಟ್ಟಿತ್ತು. ಪರಿಸ್ಥಿತಿ ನಿಯಂತ್ರಣ ತಪ್ಪಿ, ಆ ತಂಡದವರು ಮದುವೆ ಮಂಟಪದೊಳಗೆ ನುಗ್ಗಿ, ವಧು ಮತ್ತು ಆಕೆಯ ಕುಟುಂಬ ಸೇರಿದಂತೆ ಅತಿಥಿಗಳ ಮೇಲೆ ದಾಳಿ ಮಾಡಿದ್ದಾರೆ.ನಾವು ಮದುವೆ ಸಮಾರಂಭದಲ್ಲಿ ನಿರತರಾಗಿದ್ದಾಗ, ಇದ್ದಕ್ಕಿದ್ದಂತೆ ಅವರು ಮನೆಗೆ ನುಗ್ಗಿ ವರನನ್ನು ಹೊಡೆದು, ವರನನ್ನು ಅಪಹರಿಸಿದ್ದಾರೆ.
ಮನೆಯೊಳಗಿನಿಂದ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಸಹ ದೋಚಿದ್ದಾರೆ ಎಂದು ಹೇಳಲಾಗಿದೆ. ಹೊರಗಿನ ಕುರ್ಚಿಗಳನ್ನು ತುಂಡರಿಸಿ, ವರನನ್ನು ಥಳಿಸಿ ವಾಹನದಲ್ಲಿ ಕರೆದೊಯ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಮಾಹಿತಿ ಪಡೆದ ನಂತರ ಪೊಲೀಸರು ತೀವ್ರ ಹುಡುಕಾಟ ನಡೆಸಿ 7 ಗಂಟೆಗಳಲ್ಲಿ ವರನನ್ನು ಪತ್ತೆಹಚ್ಚಿದರು. ಅಪಹರಣಕಾರರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಯಿತು.