newsics.com
ಅಹಮದಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 83 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ತನ್ನ ಕೊನೆಯ ಪಂದ್ಯವಾಡಿದ ಸಿಎಸ್‌ಕೆ ಅದ್ಭುತ ಗೆಲುವಿನೊಂದಿಗೆ 18ನೇ ಆವೃತ್ತಿಗೆ ವಿದಾಯ ಹೇಳಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು ಪಡೆದಿದೆ.18.3 ಓವರ್ ಗಳಲ್ಲಿ 147 ರನ್ ಗಳಿಗೆ ಸರ್ವಪತನ ಕಂಡಿತು.ಗುಜರಾತ್ ತಂಡದಲ್ಲಿ ಆರಂಭಿಕ ಸಾಯಿ ಸುದರ್ಶನ್ ಅವರನ್ನು ಹೊರತುಪಡಿಸಿದರೆ ಮತ್ತಾರೂ ಉತ್ತಮ ಪ್ರದರ್ಶನ ನೀಡಲಿಲ್ಲ. ಅವರು 28 ಎಸೆತಗಳಲ್ಲಿ 6 ಬೌಂಡರಿಗಳಿದ್ದ 41 ರನ್ ಗಳಿಸಿತು. ನಾಯಕ ಶುಭ್ಮನ್ ಗಿಲ್ 13 ರನ್ ಗಳಿಸಿ ಔಟಾದರು. ಅಂತಿಮ ಹಂತದಲ್ಲಿ ಅರ್ಶದ್ ಖಾನ್(20) ಬಿರುಸಿನ ಆಟವಾಡಲು ಪ್ರಯತ್ನಿಸಿದರೂ ನೂರ್ ಅಹ್ಮದ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು.
ಐಪಿಎಲ್ನ ಪಾಯಿಂಟ್ ಟೇಬಲ್ನಲ್ಲಿ ಗುಜರಾತ್ ಒಟ್ಟು 14 ಪಂದ್ಯಳಿಂದ 18 ಅಂಕಗಳಿಂದ ಟಾಪ್ನಲ್ಲಿದೆ. ಗುಜರಾತ್ನ ಲೀಗ್ ಮ್ಯಾಚ್ಗಳು ಮುಗಿದ ಕಾರಣ 18 ಅಂಕಗಳೇ ಅಂತಿಮವಾಗಲಿವೆ. ಆದರೆ ಆರ್ಸಿಬಿ ಬಳಿ 17 ಅಂಕಗಳಿಸಿದ್ದು ಇನ್ನೊಂದು ಪಂದ್ಯ ಗೆದ್ದರೇ 19 ಅಂಕದಿಂದ ಟೇಬಲ್ನಲ್ಲಿ ಟಾಪರ್ ಆಗಲಿದೆ.