newsics.com
ನ್ಯೂಯಾರ್ಕ್: ಮೆಕ್ಸಿಕನ್ ನೌಕಾಪಡೆಯ ‘ಕ್ವಾವುಟೆಮೊಕ್’ ಹಡಗು ಅಮೆರಿಕದ ನ್ಯೂಯಾರ್ಕ್ ನಗರದ ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ ಹೊಡೆದಿದ್ದು, ಹಡಗಿನಲ್ಲಿದ್ದ 277 ನೌಕಾಪಡೆ ಸಿಬ್ಬಂದಿ ಪೈಕಿ, ಇಬ್ಬರು ಸಾವನ್ನಪ್ಪಿದ್ದು, 19 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವರು ನೀರಲ್ಲಿ ಬಿದ್ದಿದ್ದಾರೆ.
ನ್ಯೂಯಾರ್ಕ್ ಪೊಲೀಸ್ ಇಲಾಖೆಯ ವಕ್ತಾರರ ಪ್ರಕಾರ, ಮೆಕ್ಸಿಕನ್ ಹಡಗು ರಾತ್ರಿ 8:26 ರ ಸುಮಾರಿಗೆ ನ್ಯೂಯಾರ್ಕ್ ಸೇತುವೆಗೆ ಡಿಕ್ಕಿ ಹೊಡೆದಿದೆ ಮತ್ತು ಹಲವಾರು ಜನರಿಗೆ ಸಹಾಯ ನೀಡಲಾಗುತ್ತಿದೆ.
ಈಸ್ಟ್ ರಿವರ್ನ 147 ಅಡಿ ಎತ್ತರದ ಎರಡು ಸೇತುವೆಗೆ ಡಿಕ್ಕಿ ಹೊಡೆದ ಮೆಕ್ಸಿಕನ್ ನೌಕಾಸೇನೆ ಹಡಗು, ಸೇತುವೆ ಮಧ್ಯಭಾಗದಲ್ಲಿ ಸಿಲುಕಿಕೊಂಡಿತು. ಈ ವೇಳೆ ಡಿಕ್ಕಿಯ ರಭಸಕ್ಕೆ ಹಡಗಿನ ಡೆಕ್ ಮೇಲಿದ್ದ ಮೆಕ್ಸಿಕೋ ನೌಕಾಪಡೆಯ ಹಲವು ನಾವಿಕರು ನದಿಗೆ ಹಾರಿ ಬಿದ್ದಿದ್ದಾರೆ.