newsics.com
ಕನ್ನಡ ಬಿಗ್ಬಾಸ್ ಸೀಸನ್ 8ರ ಸ್ಪರ್ಧಿ, ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಶಮಂತ್ ಬ್ರೋ ಗೌಡ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿನ್ನೆ ಅದ್ಧೂರಿಯಾಗಿ ರಿಸೆಪ್ಶನ್ ಮಾಡಿಕೊಂಡಿದ್ದರು. ಶಮಂತ್ ಬ್ರೋ ಗೌಡ ರಿಸೆಪ್ಶನ್ಗೆ ಕನ್ನಡ ಕಿರುತೆರೆ ನಟ, ನಟಿಯರು, ಗಾಯಕರು, ಸ್ಯಾಂಡಲ್ವುಡ್ ಸ್ಟಾರ್ಗಳು ಆಗಮಿಸಿ ನವ ಜೋಡಿ ಶುಭ ಹಾರೈಸಿದ್ದರು.
ಮೇಘನಾ ಗ್ರಾಮ್ ಅವರ ಕಾಲೇಜಿನ್ ಇವೆಂಟ್‌ವೊಂದರಲ್ಲಿ ಶಮಂತ್ ಬ್ರೊ ಗೌಡ ಆಗಮಿಸಿದ್ದರು. ಆ ವೇಳೆ ಶಮಂತ್ ಬ್ರೊ ಗೌಡ, ಮೇಘನಾಗೆ ಪರಿಚಯ ಆಗಿತ್ತಂತೆ. ಆಮೇಲೆ ಆ ಪರಿಚಯ ಸ್ನೇಹ ಆಯ್ತು, ಪ್ರೀತಿ ಹುಟ್ಟಿ ಈಗ ಕುಟುಂಬದವರ ಒಪ್ಪಿಗೆ ಪಡೆದು ಈ ಜೋಡಿ ಮದುವೆಯಾಗಿದ್ದಾರೆ.
ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಮಂತ್ ಬ್ರೋ ಗೌಡ ಹಾಗೂ ಮೇಘನಾಗೆ ಶುಭ ಹಾರೈಸಲು ಸ್ಟಾರ್ ನಟ ನಟಿಯರು ಆಗಮಿಸುತ್ತಿದ್ದಾರೆ.