newsics.com
ನಟಿ ಊರ್ವಶಿ ರೌಟೇಲಾ ತಮ್ಮ ವಿಶಿಷ್ಟ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ತನ್ನ ಲುಕ್ ನಿಂದಲೇ ಜನರನ್ನು ಅಚ್ಚರಿಗೊಳಿಸುವ ನಟಿ, 2025 ರ ಕೇನ್ಸ್ ಚಲನಚಿತ್ರೋತ್ಸವಕ್ಕೆ ಹಾಜರಾಗಿದ್ದರು. ಭಾರತದ ನಟಿ ಊರ್ವಶಿ ರೌಟೇಲಾ ಅವರು ಕೆಂಪು ಹಾಸಿನ ಮೇಲೆ ಕಾಣಿಸಿಕೊಂಡಿದ್ದು, ಅವರ ಉಡುಗೆ ಮತ್ತು ಕೈಯಲ್ಲಿದ್ದ ವಿಚಿತ್ರ ಕ್ಲಚ್ ಎಲ್ಲರ ಗಮನ ಸೆಳೆಯಿತು.
ಕೇನ್ಸ್‌ನ ರೆಡ್ ಕಾರ್ಪೆಟ್ ಮೇಲೆ ಊರ್ವಶಿ ರೌಟೇಲಾ ಪೋಸ್ ನೀಡಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ನಟಿ ನೀಲಿ, ಕೆಂಪು ಮತ್ತು ಹಳದಿ ಬಣ್ಣದ ಸ್ಟ್ರಾಪ್‌ಲೆಸ್ ವರ್ಣರಂಜಿತ ಉಡುಪನ್ನು ಧರಿಸಿದ್ದರು. ಅವರು ಈ ಉಡುಪಿಗೆ ಭಾರವಾದ ಕಿವಿಯೋಲೆಗಳನ್ನು ಧರಿಸಿ ಮ್ಯಾಚ್ ಮಾಡಿದರು.
ಕೈಯಲ್ಲಿದ್ದ ಪ್ಯಾರಟ್ ಕ್ಲಚ್‌ನ ಬೆಲೆ ಬರೋಬ್ಬರಿ 4 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ ಕ್ರಿಸ್ಟಲ್‌ಗಳಿಂದ ಅಲಂಕರಿಸಲ್ಪಟ್ಟಿದ್ದ ಈ ಕ್ಲಚ್ ಅನ್ನು ಊರ್ವಶಿ ಕ್ಯಾಮೆರಾಗಳಿಗೆ ಪೋಸ್ ನೀಡುವಾಗ ಮುದ್ದಾಡುತ್ತಿರುವುದು ಕಂಡುಬಂತು.
ಸಾಮಾಜಿಕ ಮಾಧ್ಯಮದಲ್ಲಿ ಊರ್ವಶಿ ಅವರ ಈ ವಿಚಿತ್ರ ಫ್ಯಾಷನ್ ಬಗ್ಗೆ ತರಹೇವಾರಿ ಕಾಮೆಂಟ್‌ಗಳು ಹರಿದಾಡುತ್ತಿವೆ. ಕೆಲವರು ಅವರನ್ನು ಟ್ರೋಲ್ ಮಾಡುತ್ತಿದ್ದರೆ, ಇನ್ನು ಕೆಲವರು ಅವರ ದಿಟ್ಟತನವನ್ನು ಮೆಚ್ಚಿಕೊಂಡಿದ್ದಾರೆ.
ಈ ಉದ್ಘಾಟನಾ ಸಮಾರಂಭದಲ್ಲಿ ರಾಬರ್ಟ್ ಡಿ ನಿರೋ ಅವರಿಗೆ ಗೌರವ ಪ್ರಶಸ್ತಿ ನೀಡಲಾಯಿತು. ಲಿಯೋನಾರ್ಡೊ ಡಿಕಾಪ್ರಿಯೊ ಮತ್ತು ಬೆಲ್ಲಾ ಹಡಿದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಒಟ್ಟಿನಲ್ಲಿ, ಊರ್ವಶಿ ರೌಟೇಲಾ ಅವರ ಈ ವಿಚಿತ್ರ ಮತ್ತು ದುಬಾರಿ ಫ್ಯಾಷನ್ ಕಾನ್ಸ್ 2025 ರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.