newsics.com
ಆಪರೇಷನ್ ಸಿಂಧೂರದ ಬಳಿಕ ಭಾರತ ಪಾಕಿಸ್ತಾನದ ನಡುವೆ ಉಂಟಾಗಿದ್ದ ಸಂಘರ್ಷ ಸದ್ಯ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗುವ ಮೂಲಕ ಉಭಯ ದೇಶಗಳ ನಡುವೆ ತಾತ್ಕಾಲಿಕ ಯುದ್ಧದ ಆತಂಕ ದೂರವಾಗಿದೆ.
ದೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಉಗ್ರವಾದದ ವಿರುದ್ಧ ನಮ್ಮ ಹೋರಾಟ ನಿರಂತರ, ಉಗ್ರರು ಮತ್ತು ಉಗ್ರರನ್ನು ಪೋಷಿಸುವವರ ವಿರುದ್ಧ ನಮ್ಮ ಹೋರಾಟ ನಿರಂತರ ಎಂದಿದ್ದಾರೆ. ಮಾತ್ರವಲ್ಲ ಇದು ಶಾಶ್ವತ ಕದನ ವಿರಾಮ ಅಲ್ಲ, ಬದಲಾಗಿ ಇದು ತಾತ್ಕಾಲಿಕ ಕದನ ವಿರಾಮ ಯಾವಾಗ ಬೇಕಾದ್ರೂ ಪಾಕಿಸ್ತಾನದ ವಿರುದ್ಧ ನಾವು ದಾಳಿ ನಡೆಸಬಹುದು ಎಂದಿದ್ದಾರೆ.
ಆ ಮೂಲಕ ಶಾಶ್ವತ ಕದನ ವಿರಾಮ ಘೊಷಣೆಯಾಗಿದೆ ಎಂದಿದ್ದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸೈಲೆಂಟ್ ಆಗಿ ಟಾಂಗ್ ನೀಡಿದರು.ಇಂದು ಎಲ್ಲಾ ಭಯೋತ್ಪಾದಕ ಸಂಘಟನೆಗಳಿಗೂ ನಮ್ಮ ದೇಶದ ಹೆಣ್ಣುಮಕ್ಕಳಿಂದ ಸಿಂಧೂರ ತೆಗೆಯುವುದರ ಪರಿಣಾಮವೇನೆಂದು ತಿಳಿದಿದೆ. ಆಪರೇಷನ್ ಸಿಂಧೂರ್ ಕೇವಲ ಹೆಸರಲ್ಲ. ಇದು ದೇಶದ ಕೋಟ್ಯಂತರ ಜನರ ಭಾವನೆಗಳ ಪ್ರತಿಬಿಂಬವಾಗಿದೆ. ಆಪರೇಷನ್ ಸಿಂಧೂರ್ ನ್ಯಾಯದ ಅವಿಚ್ಛಿನ್ನ ಪ್ರತಿಜ್ಞೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.