newsics.com
ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ ಆಗಿದೆ.ಬಂಗಾರ ಕೊಳ್ಳಲು ಹಬ್ಬಗಳು ನೆಪವಷ್ಟೆ. ಅಂತಿಮವಾಗಿ ಇದು ಉಳಿತಾಯ, ನಮ್ಮಲ್ಲೂ ಒಂದಿಷ್ಟು ಆಭರಣಗಳಿವೆ ಎಂಬ ಸಂತೃಪ್ತಿ.ಇತ್ತೀಚಿನ ದಿನಗಳಲ್ಲಿ ಬಂಗಾರ ಏರಿಕೆ ಕಾಣುತ್ತಿದ್ದು, ಕೊಳ್ಳುವವರಿಗೆ ಹೊರೆಯಾಗುತ್ತಿದೆ. ಇನ್ನು ಬಂಗಾರದ ಮೇಲೆ ಹೂಡಿಕೆ ಮಾಡಿಕೆ ಮಾಡಿದವರಿಗೆ, ಗೋಲ್ಡ್ ಚೀಟಿಯಂತಹ ಸ್ಕೀಮ್‌ಗಳಲ್ಲಿ ಪಾವತಿಸುವವರಿಗೆ ಹಬ್ಬ ಅಂತಾನೇ ಹೇಳ್‌ಬಹುದು ಬಿಡಿ. ಅತಿದೊಡ್ಡ ಮಾರುಕಟ್ಟೆ ಹೊಂದಿರುವ ಚಿನ್ನ, ಬೆಳ್ಳಿ, ದರದಲ್ಲಿ ದಿನವೂ ಬದಲಾಗುತ್ತಿರುತ್ತದೆ. ಹಾಗಿದ್ರೆ ಇಂದು ಎಷ್ಟಾಗಿದೆ ಬೆಲೆ ನೋಡೋಣ.
22 ಕ್ಯಾರೆಟ್ಗೆ 1,650 ರೂ, ಇಳಿದು 88,800 ಆಯಿತು. ಇತ್ತ ಬೆಳ್ಳಿ ಬೆಲೆಯಲ್ಲೂ ಕೆ.ಜಿ.ಗೆ 1,100 ಕಡಿಮೆಯಾಗಿ 97,900 ರೂಪಾಯಿ ಆಗಿದೆ. ಇನ್ನೂ, ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನದ ಬೆಲೆಯೂ 10 ಗ್ರಾಂಗೆ 1 ಲಕ್ಷ ರೂ. ಗಡಿ ದಾಟಿತ್ತು.ಬೆಂಗಳೂರಿನಲ್ಲಿ ಸೋಮವಾರ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,800 ರೂಪಾಯಿ ಇಳಿಕೆ ಕಂಡಿದ್ದು, 96,880 ರೂ ತಲುಪಿತು.