newsics.com
ದಿಸ್ಪುರ್: ತಾಯಿಯ ಪ್ರಿಯತಮನಿಂದ 10 ವರ್ಷದ ಮಗ ಕೊಲೆಯಾಗಿರುವ ಘಟನೆ ಆಸ್ಸಾಂನ ಗುವಾಹಟಿಯಲ್ಲಿ ನಡೆದಿದೆ.
ಆರೋಪಿಯನ್ನು ಜಿತುಮೋನಿ ಹಲೋಯ್ ಎಂದು ತಿಳಿಯಲಾಗಿದ್ದು, ಮೃತ ಬಾಲಕನ ದೇಹ ಸೂಟ್‌ಕೇಸ್‌ವೊಂದರಲ್ಲಿ ಪತ್ತೆಯಾಗಿದೆ.
ತನ್ನ ಮಗು ಟ್ಯೂಷನ್‌ನಿಂದ ಮನೆಗೆ ಹಿಂತಿರುಗಿಲ್ಲ ಎಂದು ಮಹಿಳೆ ಶನಿವಾರ ಪೊಲೀಸರಿಗೆ ನಾಪತ್ತೆ ದೂರು ನೀಡಿದ ನಂತರ ತನಿಖೆ ಆರಂಭಿಸಲಾಯಿತು.
ತನಿಖೆಯ ಸಮಯದಲ್ಲಿ, ಪತಿಯಿಂದ ಬೇರ್ಪಟ್ಟ ಮಹಿಳೆ ಜಿತುಮೋನಿ ಹಲೋಯ್ ಎಂಬ ಇನ್ನೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಪೊಲೀಸರಿಗೆ ತಿಳಿದುಬಂದಿದೆ. ಪೊಲೀಸರು ಆತನನ್ನು ವಿಚಾರಿಸಿ ಸೂಟ್‌ಕೇಸ್ ಇರುವ ಸ್ಥಳಕ್ಕೆ ಕರೆದೊಯ್ದಾಗ ಆತ ಅಪರಾಧ ಒಪ್ಪಿಕೊಂಡಿದ್ದಾನೆ.
ನಂತರ ನಗರದ ಹೊರವಲಯದಲ್ಲಿರುವ ಪೊದೆಯೊಂದರಲ್ಲಿ ಸೂಟ್‌ಕೇಸ್‌ನಲ್ಲಿ ತುಂಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಹಿಳೆಯನ್ನು ಸಹ ವಶಕ್ಕೆ ಪಡೆಯಲಾಗಿದೆ.