newsics.com
ಒಂದೆಡೆ ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಿರುವುದರ ನಡುವೆ ಚಿನ್ನ ಖರೀದಿದಾರರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಚಿನ್ನದ ದರ ಹಾವು ಏಣಿ ಆಟ ಆಡುತ್ತಿದೆ. ಕಳೆದ ನಾಲ್ಕೈದು ನಿರಂತರವಾಗಿ ಚಿನ್ನದ ದರ ಏರಿಕೆ ಕಂಡಿದ್ದರಿಂದ ಆಭರಣಪ್ರಿಯರು ಶಾಕ್‌ಗೆ ಒಳಗಾಗಿದ್ದರು. ಇದೀಗ ಚಿನ್ನದ ದರವು ದಿಢೀರನೆ ಭಾರೀ ಇಳಿಕೆ ಕಂಡಿದೆ.
ಗ್ರಾಮ್ಗೆ ಬರೋಬ್ಬರಿ 165 ರೂಗಳಷ್ಟು ಬೆಲೆ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ ಬಹುತೇಕ 185 ರೂಗಳಷ್ಟು ಕಡಿಮೆ ಆಗಿದೆ. 10 ಗ್ರಾಮ್ ಆಭರಣ ಚಿನ್ನದ ಬೆಲೆ 1,650 ರೂಗಳ ಇಳಿಕೆ ಆಗಿದೆ. 9,045 ರೂ ಇದ್ದ ಬೆಲೆ 8,880 ರೂಗೆ ಇಳಿದಿದೆ.
ಬೆಂಗಳೂರಿನಲ್ಲಿ ಚಿನ್ನ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 88,800 ರೂ ಆಗಿದೆ. 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 96,880 ರೂ, ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 88,800 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 96,880 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 88,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,900 ರುಪಾಯಿಯಲ್ಲಿ ಇದೆ