Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > India Pakistan ಭಾರತ-ಪಾಕ್ ಯುದ್ಧದಲ್ಲಿ ಅಮೆರಿಕದ ಮಧ್ಯಪ್ರವೇಶ ಏಕೆ? ಕದನ ವಿರಾಮದಿಂದ ಭಯೋತ್ಪಾದನೆ ದಾಳಿ ನಿಲ್ಲಬಹುದ?
ದೇಶವಿದೇಶ

India Pakistan ಭಾರತ-ಪಾಕ್ ಯುದ್ಧದಲ್ಲಿ ಅಮೆರಿಕದ ಮಧ್ಯಪ್ರವೇಶ ಏಕೆ? ಕದನ ವಿರಾಮದಿಂದ ಭಯೋತ್ಪಾದನೆ ದಾಳಿ ನಿಲ್ಲಬಹುದ?

Share
2 Min Read
SHARE

newsics.com

ನವದೆಹಲಿ: ಮೂರು ದಿನಗಳಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ತೆರೆ ಬಿದ್ದಿದ್ದು ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ಕರೆ ಮಾಡಿ ದಾಳಿ ನಿಲ್ಲಿಸುವಂತೆ ಒತ್ತಾಯಿಸಿದ್ದು, ಆ ನಂತರ ಕದನ ವಿರಾಮ ಪ್ರಕ್ರಿಯೆ ಪ್ರಾರಂಭಿಸಲಾಯಿತು ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.

ತಮ್ಮ ಮಧ್ಯಸ್ಥಿಕೆ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಇಂತಹ ಉದಿಗ್ನ ಪರಿಸ್ಥಿತಿಯಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಿಸಿದ್ದು ಯಾಕಾಗಿ? ಇದರ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಈ ಬಗ್ಗೆ ಒಂದು ವಿಶ್ಲೇಷಣೆ ವರದಿ ಇಲ್ಲಿದೆ

ಡೊನಾಲ್ಡ್ ಟ್ರಂಪ್ ಆರಂಭದಲ್ಲಿ ಭಾರತದ ಬೆಂಬಲವನ್ನು ಘೋಷಿಸಿದ್ದರು, ವಿಶೇಷವಾಗಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ (26 ಜೀವಗಳನ್ನು ಬಲಿತೆಗೆದುಕೊಂಡ ಘಟನೆ) ನಂತರ ಭಾರತದ ಪ್ರತಿದಾಳಿಯನ್ನ ಬೆಂಬಲಿಸಿದ್ದರು. ಆದರೆ, ಭಾರತದ ‘ಆಪರೇಷನ್ ಸಿಂದೂರ’ ಮೂಲಕ ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿಗಳು 100 ಕ್ಕೂ ಹೆಚ್ಚು ಉಗ್ರರ ಸಾವು) ಪಾಕಿಸ್ತಾನದಲ್ಲಿ ತೀವ್ರ ಆತಂಕವನ್ನುಂಟುಮಾಡಿದವು. ಕದನ ವಿರಾಮಕ್ಕೆ ಟ್ರಂಪ್ ಒತ್ತಾಯಿಸಿದ್ದರು.

ಭಾರತ-ಪಾಕ್ ಯುದ್ಧದಲ್ಲಿ ಅಮೆರಿಕದ ಮಧ್ಯಪ್ರವೇಶ ಮಾಡಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ. ಅಮೆರಿಕದ ಮಧ್ಯಸ್ಥಿಕೆಗೆ ಪ್ರಮುಖ ಕಾರಣವೆಂದರೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಜಾಗತಿಕ ಮಟ್ಟದಲ್ಲಿ ಒತ್ತಡ ಬೀರುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ, ವಿಶೇಷವಾಗಿ ಪರಮಾಣು ಶಕ್ತಿಯನ್ನು ಹೊಂದಿರುವ ಎರಡು ರಾಷ್ಟ್ರಗಳ ನಡುವಿನ ಯುದ್ಧ, ಜಾಗತಿಕ ಆರ್ಥಿಕತೆ, ಭದ್ರತೆ, ಮತ್ತು ರಾಜಕೀಯ ಸ್ಥಿರತೆಗೆ ಗಂಭೀರ ಬೆದರಿಕೆಯನ್ನುಂಟುಮಾಡುತ್ತದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದ ದಾಳಿಗಳನ್ನು ತಡೆಯಲು ಅಮೆರಿಕದ ಮಧ್ಯಸ್ಥಿಕೆಗೆ ಮನವಿ ಮಾಡಿದ್ದರು.

ಹೀಗಾಗಿ ಡೊನಾಲ್ಡ್ ಟ್ರಂಪ್ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ಘೋಷಿಸಿದರು. ಇದರ ಹಿಂದೆ ಅಮೆರಿಕದ ಭೌಗೋಳಿಕ-ರಾಜಕೀಯ ಲಾಭಗಳು, ಚೀನಾದ ಪ್ರಭಾವವನ್ನು ಸಮತೋಲನಗೊಳಿಸುವ ಉದ್ದೇಶ, ಮತ್ತು ಪಾಕಿಸ್ತಾನದ ಮೇಲಿನ ಆರ್ಥಿಕ-ರಾಜಕೀಯ ಒತ್ತಡವನ್ನು ಕಾಯ್ದುಕೊಳ್ಳುವ ತಂತ್ರವಿರಬಹುದು. ಅಮೆರಿಕವು ಭಾರತದೊಂದಿಗೆ ಗಟ್ಟಿಯಾದ ರಾಜತಾಂತ್ರಿಕ ಸಂಬಂಧವನ್ನು ಹೊಂದಿದ್ದರೂ, ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳಲು ಬಯಸುವುದಿಲ್ಲ ಎಂಬುದು ಗಮನಿಸಬೇಕು. ಏಕೆಂದರೆ ಇದು ಪಾಕಿಸ್ತಾನವನ್ನು ಚೀನಾದ ಹತ್ತಿರಕ್ಕೆ ತಳ್ಳಬಹುದು.

ಕದನ ವಿರಾಮದಿಂದ ತಾತ್ಕಾಲಿಕ ಎರಡೂ ರಾಷ್ಟ್ರಗಳ ನಡುವೆ ಉದ್ದಿಗ್ನ ಪರಿಸ್ಥತಿ ನಿಯಂತ್ರಣಕ್ಕೆ ಬರಬಹುದು. ಆದರೆ ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲವನ್ನು ಸಂಪೂರ್ಣವಾಗಿ ತಡೆಯದಿರಬಹುದು. ಇದರಿಂದ ಭಯೋತ್ಪಾದನೆ ದಾಳಿ ನಿಲ್ಲುವುದಿಲ್ಲ.ಅಮೆರಿಕದ ಮಧ್ಯಸ್ಥಿಕೆಯು ತಾತ್ಕಾಲಿಕ ಶಾಂತಿಯನ್ನು ತಂದಿದ್ದರೂ, ಭಾರತ-ಪಾಕಿಸ್ತಾನ ಸಂಘರ್ಷದ ಮೂಲ ಕಾರಣಗಳನ್ನು ಬಗೆಹರಿಯುವುದಿಲ್ಲ. ಭಾರತವು ತನ್ನ ಭಯೋತ್ಪಾದನೆ-ವಿರೋಧಿ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದರೂ, ಕದನ ವಿರಾಮವು ಪಾಕಿಸ್ತಾನಕ್ಕೆ ಮರುಸಂಘಟನೆಗೆ ಅವಕಾಶ ನೀಡಬಹುದು.

ಕದನ ವಿರಾಮವು ಪಾಕಿಸ್ತಾನಕ್ಕೆ ತನ್ನ ಸೇನಾ ಮತ್ತು ಭಯೋತ್ಪಾದಕ ಮೂಲಸೌಕರ್ಯವನ್ನು ಮರುನಿರ್ಮಾಣ ಮಾಡಲು ಸಮಯವನ್ನು ನೀಡಬಹುದು ಎಂಬ ಆತಂಕವಿದೆ.

ಭಾರತೀಯರಲ್ಲಿ ಕದನ ವಿರಾಮದ ಬಗ್ಗೆ ಮಿಶ್ರ ಭಾವನೆಗಳಿವೆ. ಕೆಲವು ಎಕ್ಸ್‌ ಪೋಸ್ಟ್‌ಗಳು ಭಾರತದ ನಿರ್ಧಾರವನ್ನು ಅಮೆರಿಕದ ಒತ್ತಡಕ್ಕೆ ಮಣಿದಂತೆ ಟೀಕಿಸಿವೆ, ಇದು ಪಾಕಿಸ್ತಾನವನ್ನು ರಕ್ಷಿಸುವ ತಂತ್ರವೆಂದು ಆರೋಪಿಸಿವೆ. ಹೀಗಾಗಿ ಕದನ ವಿರಾಮ ಘೋಷಣೆಯಿಂದ ಭಾರತೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ

TAGGED:#OperationSindoor #attack #India #Pakistan # #Armistice #trump
Share This Article
Facebook Twitter Copy Link Print
Previous Article IPL 2025 -ಎರಡು ಪಂದ್ಯಗಳ ಟಿಕೆಟ್‌ಗಳ ಹಣವನ್ನು ಮರುಪಾವತಿಸುವುದಾಗಿ ಘೋಷಿಸಿದ ಆರ್ಸಿಬಿ
Next Article India Pakistan ಭಾರತ ಯಾವುದೇ ಕಾರಣಕ್ಕೆ ಸಿಂಧೂ ನದಿಯ ನೀರನ್ನು ಪಾಕ್ ಗೆ ಬಿಡುವುದಿಲ್ಲ -ವಿದೇಶಾಂಗ ಸಚಿವಾಲಯ

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

ದಳಪತಿ ವಿಜಯ್ ಕೊಲ್ಲೂರು ಲಕ್ಸುರಿ ಸವಾರಿ! ಕೋಟಿ ಕೋಟಿ ಬೆಲೆಯ ಈ ಕಾರಿನ ರಹಸ್ಯವೇನು?

2 Min Read
ಕರ್ನಾಟಕದೇಶಪ್ರಮುಖ

IRCTC New Website ಜುಲೈ 15ಕ್ಕೆ IRCTC ಹೊಸ ವೆಬ್‌ಸೈಟ್ ಲಾಂಚ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?