newsics.com
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಮೂಲಕ ಪಾಕ್ಗೆ ಭಾರತ ತಕ್ಕ ಪಾಠ ಕಲಿಸಿದೆ. 25 ನಿಮಿಷದ ಪ್ರತೀಕಾರದ ವೈಮಾನಿಕ ದಾಳಿಯಲ್ಲಿ ಪಾಕಿಸ್ತಾನ ಉಗ್ರರ ನೆಲೆಗಳು ಪೀಸ್, ಪೀಸ್ ಆಗಿವೆ. ಆಪರೇಷನ್ ಸಿಂಧೂರ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ಬುಡಕ್ಕೆ ಬೆಂಕಿ ಹಚ್ಚಿ ಬಿಸಿ ಮುಟ್ಟಿಸಿದೆ.
ಇದೀಗ ಪಾಕಿಸ್ತಾನದ ಕಪಟ ನಾಟಕವನ್ನು ಪಾಕಿಸ್ತಾನಿ ಯುವಕನೊಬ್ಬ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಇಷ್ಟೇ ಅಲ್ಲ ಭಾರತದ ಆಪರೇಶನ್ ಸಿಂದೂರ್ಗೆ ಬೆಂಬಲ ನೀಡಿದ್ದಾರೆ.
ಅಭಯ್ಯ್ ಅನ್ನೋ ಇನ್ಸ್ಟಾಗ್ರಾಂ ಖಾತೆಯಲ್ಲಿ ತಾನು ಪಾಕಿಸ್ತಾನಿ ಎಂದು ಹೇಳಿಕೊಂಡಿರುವ ಯುವಕ ವಿಡಿಯೋ ವೈರಲ್ ಆಗಿದೆ. ವಿಡಿಯೋದ ಆರಂಭದಲ್ಲೇ ಯುವಕ ತಾನು ಪಾಕಿಸ್ತಾನಿ ಎಂದಿದ್ದಾನೆ. ಈ ಮೂಲಕ ಮಹತ್ವದ ಸಂದೇಶವನ್ನು ನೀಡಿದ್ದಾರೆ.
ಈ ವಿಡಿಯಯೋದಲ್ಲಿ ಯುವಕ, ಭಾರತಕ್ಕೆ ಪ್ರತಿದಾಳಿ ನಡೆಸುವ ಎಲ್ಲಾ ಹಕ್ಕಿದೆ. ಮೊದಲು ನೀವು(ಪಾಕಿಸ್ತಾನ) ಅವರ ನಾಗರೀಕರ ಮೇಲೆ ದಾಳಿ ಮಾಡಿದ್ದೀರಿ. ಯಾವಗ ಭಾರತ ಪ್ರತಿ ದಾಳಿ ಮಾಡಲು ಆರಂಭಿಸಿದಾಗ ದಿಢೀರ್ ಶಾಂತಿಯ ಮಂತ್ರ ಪಠಿಸುತ್ತಿದ್ದೀರಿ. ಜೊತೆಗೆ ಮಾನವ ಹಕ್ಕುಗಳ ಕುರಿತು ಮಾತಾನಾಡುತ್ತೀರಿ. ಇದು 26 ಅಮಾಯಕರ ಜೀವ ಹೋದಾಗ ಇರಲೇ ಇಲ್ಲ. ಭಾರತ ಪ್ರತಿ ದಾಳಿ ನಡೆಸಲು ಆರಂಭಿಸಿದಾಗ ಈಗ ಸಂತ್ರಸ್ತರ ರೀತಿ ವರ್ತಿಸುತ್ತಿದ್ದೀರಿ. ಯಾರೂ ಕೂಡ ಯುದ್ಧ ಬಯಸಲ್ಲ. ಅತ್ತ ಭಾರತಕ್ಕೂ ಯುದ್ಧ ಬೇಡ, ಇತ್ತ ಪಾಕಿಸ್ತಾನಕ್ಕೂ ಯುದ್ಧ ಬೇಡ. ಆದರೆ ಭಯೋತ್ಪಾದಕತೆಗೆ ಪ್ರೋತ್ಸಾಹ ನೀಡಿದಾಗ, ತಿರುಗೇಟು ಪ್ರತಿದಾಳಿಯಾಗುತ್ತೆ ಅನ್ನೋದು ಖಚಿತ. ನಿಮ್ಮ ಜನರ ಪ್ರಾಣ ಹೋದಾಗ ನಿಮಗೆ ಸುಲಭವಾಗಿ ಶಾಂತಿ ಮಂತ್ರ ಪಠಿಸುತ್ತೀರಿ. ಮತ್ತೊಂದು ಮುಖ್ಯ ವಿಚಾರ ಎಂದರೆ ಭಾರತ ಇದನ್ನು ಶುರು ಮಾಡಿಲ್ಲ. ನೀವು(ಪಾಕಿಸ್ತಾನ) ಆರಂಭಿಸಿದ್ದೀರಿ. ನಿಮ್ಮ ದಾಳಿಗೆ ಭಾರತ ಪ್ರತಿಕ್ರಿಯಿಸಿದೆ. ಇದು ಯುದ್ಧವಲ್ಲ, ಇದು ಜಸ್ಟೀಸ್ ಎಂದು ಪಾಕಿಸ್ತಾನಿ ಎಂದು ಹೇಳಿರುವ ಯುವಕ ವಿಡಿಯೋ ಮೂಲಕ ಸಂದೇಶ ನೀಡಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
https://www.instagram.com/reel/DJWnQ8BTr6V/?igsh=MWg1N3J3dDR0eGpqbQ==