newsics.com
ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಅವರ ತಂಡದ ಸದಸ್ಯರು ಹಾಗೂ ಗುಜರಾತ್ ಟೈಟನ್ಸ್ ತಂಡದ ಮುಖ್ಯ ಕೋಚ್ ಆಗಿರುವ ಆಶಿಶ್ ನೆಹ್ರಾ ಅವರ ಮೇಲೆ ಐಪಿಎಲ್ ಆಡಳಿತ ಮಂಡಳಿ ದೊಡ್ಡಪ್ರಮಾಣದ ದಂಡ ವಿಧಿಸಿದೆ.ಈ ಕುರಿತಂತೆ ಐಪಿಎಲ್ ವ್ಯವಸ್ಥಾಪಕ ಮಂಡಳಿಯು ಅಧಿಕೃತ ಪ್ರಕಟಣೆಯನ್ನು ನೀಡಿದೆ.
ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ತಂಡವು ಮಂದಗತಿಯಲ್ಲಿ ಓವರ್ ಗಳನ್ನು ಮಾಡಿದ ಕಾರಣಕ್ಕಾಗಿ ಅವರ ವಿರುದ್ಧ ಈ ದಂಡ ಪ್ರಯೋಗವಾಗಿದೆ. ಹಾರ್ದಿಕ್ ಪಾಂಡ್ಯ ಅವರಿಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಐಪಿಎಲ್ ಸೀಸನ್ ನಲ್ಲಿ ಮುಂಬೈ ತಂಡ ಹೀಗೆ ಸ್ಲೋ ಓವರ್ ರೇಟ್ ಮಾಡಿರುವುದು ಇದು ಎರಡನೇ ಬಾರಿ. ಹಾಗಾಗಿ, ಆ ತಂಡದ ಬೌಲರ್ ಗಳು ಮಾಡಿದ ತಪ್ಪಿಗೆ ಪ್ರತಿಯಾಗಿ ತಂಡದ ನಾಯಕನ ಮೇಲೆ ದಂಡ ಪ್ರಯೋಗವಾಗಿದೆ.