newsics.com
ಜಮ್ಮು-ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲಿನಲ್ಲಿ ಉಗ್ರರು ಅಟ್ಟಹಾಸ ಮರೆದಿದ್ದಾರೆ. ಉಗ್ರರ ಈ ರಕ್ತದಾಹಕ್ಕೆ 26 ಭಾರತೀಯರು ಅಸುನೀಗಿದ್ದಾರೆ. ಕಾಶ್ಮೀರದಲ್ಲಿ ನಡೆದ ನರಮೇಧಕ್ಕೆ ದೇಶದಾದ್ಯಂತ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗ ಮುಂಬೈನ ಸಾರ್ವಜನಿಕ ಶೌಚಾಲಯಗಳಲ್ಲಿ ಪಾಕಿಸ್ತಾನಿ ನಟಿಯೊಬ್ಬರ ಫೋಟೋಗಳು ಕಂಡುಬಂದಿವೆ.ಮುಂಬೈ ಮೂಲದ ಕಾರ್ಯಕರ್ತ ಫೈಜಾನ್ ಅನ್ಸಾರಿ ಮಹಿರಾ ಅವರ ಫೋಟೋಗಳನ್ನು ಶೌಚಾಲಯಗಳಲ್ಲಿ ಅಂಟಿಸಿದ್ದಾರೆ. ಪಾಕಿಸ್ತಾನಕ್ಕೆ ಪಾಠ ಕಲಿಸಲು ಇದೊಂದು ಮಾರ್ಗ ಎಂದು ಅವರು ಹೇಳಿದ್ದಾರೆ.ಈ ನಟಿ ಮಹಿರಾ ಖಾನ್ ಶಾರುಖ್ ಖಾನ್ ಜೊತೆ ‘ರಯೀಸ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.
ಮಹಿರಾ ಮಾತ್ರವಲ್ಲ, ಹಾನಿಯಾ ಆಮಿರ್, ಫವಾದ್ ಖಾನ್, ಆತಿಫ್ ಅಸ್ಲಂ ಮತ್ತು ‘ಪಸೂರಿ’ ಖ್ಯಾತಿಯ ಅಲಿ ಸೇಠಿ ಫೋಟೋಗಳನ್ನು ಸಹ ಶೌಚಾಲಯಗಳಲ್ಲಿ ಅಂಟಿಸುವುದಾಗಿ ಫೈಜಾನ್ ಹೇಳಿದ್ದಾರೆ.ಮಹಿರಾ ಖಾನ್ 2006 ರಿಂದ ಮನರಂಜನಾ ಲೋಕದಲ್ಲಿದ್ದಾರೆ.
ರೇಡಿಯೋ ಜಾಕಿಯಾಗಿ ಆರಂಭಿಸಿ, 2011 ರಲ್ಲಿ ‘ಬೋಲ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅದೇ ವರ್ಷ ‘ಹಮ್ಸಫರ್’ ಧಾರಾವಾಹಿ ಪ್ರಸಾರವಾಯಿತು.
ಫೋಟೋಗಳನ್ನು ಶೌಚಾಲಯಗಳಲ್ಲಿ ಅಂಟಿಸುವ ಮೂಲಕ ಪಾಕಿಸ್ತಾನ ಕೇವಲ ಶೌಚಾಲಯ ಸ್ವಚ್ಛಗೊಳಿಸಲು ಯೋಗ್ಯ ಎಂಬ ಸಂದೇಶ ರವಾನಿಸಲು ಬಯಸುತ್ತಾರೆ.