newsics.com
ಮೀರತ್ : ಗಡ್ಡ ತೆಗೆಯುವ ವಿಚಾರದಲ್ಲಾದ ಜಗಳದ ಬಳಿಕ ಮಹಿಳೆ ಗಂಡನ ಬಿಟ್ಟು ಮೈದುನ ಜೊತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ
ಮೀರತ್‌ನ ಉಜ್ವಲ್ ಗಾರ್ಡನ್ ಕಾಲೋನಿಯಲ್ಲಿ ವಾಸಿಸುವ ಮುಸ್ಲಿಂ ಧರ್ಮಗುರು ಶಕೀರ್ ಎಂಬ ವ್ಯಕ್ತಿ ಜೊತೆ, ಏಳು ತಿಂಗಳ ಹಿಂದೆ ಅರ್ಷಿ ಎಂಬ ಯುವತಿಯ ವಿವಾಹವಾಗಿತ್ತು.
ಮದುವೆಯಾದ ಕೂಡಲೇ ಕ್ಲೀನ್ ಶೇವ್ ಮಾಡುವಂತೆ ಪತಿಗೆ ಹೇಳಿದ್ದಾಳೆ.ಇದೇ ವಿಷಯದ ಬಗ್ಗೆ ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು. ಗಡ್ಡ ತೆಗೆಯುವಂತೆ ತನ್ನ ಗಂಡನಿಗೆ ಎಷ್ಟೇ ಹೇಳಿದರೂ ಆತ ಒಪ್ಪದ ಕಾರಣ ಕ್ಲೀನ್ ಶೇವ್ ಮಾಡುತ್ತಿದ್ದ ಗಂಡನ ತಮ್ಮನತ್ತ ಅರ್ಷಿ ಆಕರ್ಷಿತಳಾಗಿದ್ದು ಇಬ್ಬರೂ ಮನೆಯಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ಗಂಡ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾನೆ.
ಇದೀಗ ದೂರಿನಲ್ಲಿ ಗಡ್ಡದ ವಿಷಯವನ್ನು ಉಲ್ಲೇಖ ಮಾಡಲಾಗಿದ್ದು, ಹಾಗೂ ಪ್ರೀತಿಯ ವಿಷಯನ್ನು ಕೂಡಾ ಉಲ್ಲೇಖಿಸಲಾಗಿದೆ. ಪೊಲೀಸರ ತನಿಖೆ ವೇಳೆ ಮಹಿಳೆ ಲುಧಿಯಾನದಲ್ಲಿದ್ದಾಳೆಂದು ತಿಳಿದು ಬಂದಿದೆ.