newsics.com
ಬೆಂಗಳೂರು : ಸ್ನೇಹಿತರಿಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದು ಹಿಂಬದಿ ಕುಳಿತಿದ್ದ SSLC ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಶ್ರೀರಾಂಪುರದ ನಿವಾಸಿ ಹರ್ಷ(17) ಎಂದು ತಿಳಿದುಬಂದಿದೆ. ಸ್ನೇಹಿತ ಸಚಿನ್ ಬೈಕ್‌ನಲ್ಲಿ ಹರ್ಷ ಹಿಂಬದಿ ಕುಳಿತುಕೊಂಡು ನ್ಯೂಬಿಇಎಲ್ ರಸ್ತೆಗೆ ಇಂದು ಬೆಳಗ್ಗೆ 6.30 ರ ಸುಮಾರಿನಲ್ಲಿ ಹೊಗುತ್ತಿದ್ದಾಗ ಸದಾಶಿವನಗರದ ಸಮೀಪ ಅಂಡರ್ ಪಾಸ್ ಬಳಿ ಹಿಂದಿನಿಂದ ವೇಗವಾಗಿ ಬಂದ ಹಾಲಿನ ಟ್ಯಾಂಕರ್ ವಾಹನ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಇಬ್ಬರು ಸವಾರರು ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಹರ್ಷ ಮೃತಪಟ್ಟಿದ್ದಾನೆ.