newsics.com
ಕಾಶ್ಮೀರ: ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ 26 ಭಾರತೀಯರು ಸಾವನ್ನಪ್ಪಿದ್ದರು. ಹೀಗಾಗಿ ಉಗ್ರರ ವಿರುದ್ಧ ಆಪರೇಷನ್ ಟಿಕ್ಕಾ ಆರಂಭಿಸಿರುವ ಭಾರತೀಯ ಸೇನೆ ಕುಪ್ಪಾರದಲ್ಲಿರುವ ಉಗ್ರ ಫಾರೂಕ್ ಮನೆ ಧ್ವಂಸ ಮಾಡದೆ.
ನಿನ್ನೆಯಷ್ಟೇ (ಏಪ್ರಿಲ್ 25) ಜಮ್ಮು-ಕಾಶ್ಮೀರದ ಟ್ರಾಲ್ ಸಮೀಪ ಆಸಿಫ್ಶೇಕ್ ಮತ್ತು ಆದಿಲ್ ಎಂಬ ಇಬ್ಬರು ಉಗ್ರರ ಮನೆಗಳನ್ನು ಯೋಧರು ಧ್ವಂಸ ಮಾಡಿದ್ದರು. ಇದೀಗ ಪಹಲ್ಗಾಮ್ ದಾಳಿಯ ಪ್ರತೀಕವಾಗಿ ಮತ್ತೊಬ್ಬ ಉಗ್ರನ ಮನೆಯಲ್ಲಿ ಐಇಡಿ ಸ್ಪೋಟಿಸಿ ಧ್ವಂಸ ಮಾಡಲಾಗಿದೆ.
ಈತ ಲಷ್ಕರ್ -ಎ-ತೊಯ್ಬಾ ಸಂಘಟನೆಯ ಉಗ್ರ ಫಾರೂಕ್ ತೇಡ್ವಾ ಎಂದು ಗುರುತಿಸಲಾಗಿದ್ದು ಸೈನಿಕರು ಉಗ್ರನ ಮನೆಯನ್ನು ಬ್ಲಾಸ್ಟ್ ಮಾಡಿದ್ದಾರೆ.
Viral: ಎಳನೀರಿನ ಟೀಯನ್ನು ಯಾವತ್ತಾದ್ರೂ ಕುಡಿದಿದ್ದೀರಾ?: ವೈರಲ್ ವಿಡಿಯೋ ನೋಡಿ