newsics.com
ವ್ಯಾಟಿಕನ್: ಸೋಮವಾರ ನಿಧನ ಹೊಂದಿದ ಕ್ರೈಸ್ತ ಪರಮೋಚ್ಚ ಧರ್ಮ ಗುರು ಪೋಪ್ ಫ್ರಾನ್ಸಿಸ್ ಪಾರ್ಥಿವ ಶರೀರದ ಅಂತಿಮ ದರ್ಶನ ಶುಕ್ರವಾರ ಮುಗಿದಿದ್ದು, ಸಂತ ಮರಿಯಾ ಬೆಸಿಲಿಕಾ ದಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ಅಂತ್ಯಕ್ರಿಯೆ ವಿಧಿವಿಧಾನ ಆರಂಭ ವಾಗಲಿದೆ. ಈ ವೇಳೆ ಅಮೆರಿಕ ಅಧ್ಯಕ್ಷ ಟ್ರಂಪ್ ಸೇರಿ ವಿಶ್ವದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.
ಸೋಮವಾರ ಪೋಪ್ ಫ್ರಾನ್ಸಿಸ್ ಮೃತಪಟ್ಟಿದ್ದರು. ಇಂದಿನವರೆಗೂ ಅವರ ಅಂತಿಮ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ನೀಡಲಾಗಿತ್ತು. ಭಾರತದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು, ಹಾಗೂ ರಾಜ್ಯ ಸರ್ಕಾರದ ಪರವಾಗಿ ಸಚಿವ ಕೆ.ಜೆ.ಜಾರ್ಜ್ ಮತ್ತು ಐವಾನ್ ಡಿಸೋಜಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಫ್ರಾನ್ಸಿಸ್ ಅವರು ಬದುಕಿರುವಾಗಲೇ ತಮ್ಮ ಅಂತಿಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ವ್ಯಾಟಿಕನ್ ಸಿಟಿಯಿಂದ ಹೊರಗಿರುವ ಸೆಂಟ್ ಬೆಸಲಿಕಾದಲ್ಲಿ ತಮ್ಮ ಸಮಾಧಿಯನ್ನು ನಿರ್ಮಿಸಬೇಕೆಂಬುದು ಅವರ ಇಚ್ಛೆಯಾಗಿತ್ತು.