newsics.com
ಇಸ್ಲಾಮಾಬಾದ್: ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಲ್ಲಿ ನಿನ್ನೆ ರಾತ್ರಿ ಪಾಕಿಸ್ಥಾನಿ ಸೇನೆಯ ಬೆಂಗಾವಲು ಪಡೆಯನ್ನು ಗುರಿಯಾಗಿಸಿ ರಿಮೋಟ್ ಕಂಟ್ರೋಲ್ ಮೂಲಕ ಐಇಡಿ ಸ್ಫೋಟ ನಡೆದಿದ್ದು, ಅಲ್ಲಿದ್ದ ಎಲ್ಲ 10 ಪಾಕ್ ಸೈನಿಕರೂ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಬಂಡುಕೋರರ ಗುಂಪಾದ ಬಲೂಚ್ ಲಿಬರೇಷನ್ ಆರ್ಮಿ(ಬಿಎಲ್‌ಎ) ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
“ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಆಕ್ರಮಿತ ಪಾಕಿಸ್ತಾನಿ ಸೇನೆಯ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದಾರೆ. ನಮ್ಮ ಪ್ರತಿರೋಧದ ಚಳವಳಿಯ ಭಾಗವಾಗಿ ಈ ದಾಳಿ ನಡೆಸಲಾಗಿದೆ’ ಎಂದು ಬಲೂಚ್ ಲಿಬರೇಷನ್ ಆರ್ಮಿ ಪ್ರಕಟಣೆ ತಿಳಿಸಿದೆ.
ಪಾಕ್ ಸೇನಾ ಟ್ರಕ್‌ಗಳು ಕ್ವೆಟ್ಟಾಗೆ ಬರುತ್ತಿದ್ದಂತೆಯೇ ಸ್ನೈಪರ್ ರೈಫಲ್ ಮತ್ತು ಐಇಡಿ ಮೂಲಕ ದಾಳಿ ನಡೆಸಲಾಗಿದ್ದು, ಅದರಲ್ಲಿದ್ದ ಎಲ್ಲ 10 ಮಂದಿ ಸೈನಿಕರೂ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಹೇಳಲಾಗಿದೆ. ದಾಳಿಯ ವಿಡಿಯೋವನ್ನೂ ಬಿಎಲ್‌ಎ ಬಿಡುಗಡೆ ಮಾಡಿದೆ.