newsics.com
ಸುದೀಪ್ ಮಗಳಿಗೆ ಹಾಡೋದು ಎಂದರೆ ಎಲ್ಲಿಲ್ಲದ ಪ್ರೀತಿ. ಇನ್ನು ಸಾನ್ವಿ ಸುದೀಪ್ ಶಿಕ್ಷಣದ ಜೊತೆಗೆ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಸಾನ್ವಿ ಅವರ ಧ್ವನಿ ಬೇರೆಯದೇ ರೀತಿ ಇದೆ. ಪಾಪ್ ಇಂಗ್ಲಿಷ್ ಹಾಡುಗಳನ್ನು ಅವರು ಅದ್ಭುತವಾಗಿ ಹಾಡುತ್ತಾರೆ. ಜೀ ಕನ್ನಡದ ‘ಸರಿಗಮಪ’ ವೇದಿಕೆ ಮೇಲೆ ‘ಅಪ್ಪಾ ಐ ಲವ್ ಯೂ ಪಾ..’ ಎಂದು ಹಾಡಿ ಎಲ್ಲರನ್ನೂ ಗಮನ ಸೆಳೆದಿದ್ದರು. ಈಗ ಅವರಿಗೆ ತೆಲುಗು ಸಿನಿಮಾಗೆ ಧ್ವನಿ ಆಗಿದ್ದಾರೆ ಅನ್ನೋದು ವಿಶೇಷ. ‘ಹಿಟ್ 3’ ಟ್ರೇಲರ್ನಲ್ಲಿ ಬರೋ ಒಂದು ಆಲಾಪದಲ್ಲಿ ಸಾನ್ವಿ ಧ್ವನಿ ಇದೆ.
‘ಹಿಟ್ 3’ ಸಿನಿಮಾದ ಟ್ರೇಲರ್ ಕೆಲ ದಿನಗಳ ಹಿಂದೆ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಟ್ರೇಲರ್ ಕೊನೆ ಆಗೋ ಸಂದರ್ಭದಲ್ಲಿ ಹಿನ್ನೆಲೆ ಸಂಗೀತದ ಜೊತೆ ಒಂದು ಧ್ವನಿಯ ಆಲಾಪ ಬರುತ್ತದೆ. ಇದು ಯಾರದ್ದು ಎಂಬ ವಿಚಾರ ಅನೇಕರಿಗೆ ಗೊತ್ತಿರಲಿಲ್ಲ. ಈ ವಿಚಾರವನ್ನು ಸ್ವತಃ ನಾನಿ ಅವರೇ ರಿವೀಲ್ ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.
ಅದು ಸಾನ್ವಿ ಅವರದ್ದು ಎಂದಿರೋ ನಾನಿ ಅವರು, ಅವರನ್ನು ಬಾಯ್ತುಂಬ ಹೊಗಳಿದ್ದಾರೆ.
ನಾನಿ ಹಾಗೂ ಸಾನ್ವಿ ಮಧ್ಯೆ ಪರಿಚಯ ಬೆಳೆಯೋಕೆ ಕಾರಣ ಆಗಿದ್ದು, ‘ಈಗ’ ಸಿನಿಮಾ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ನಾನಿ ಹೀರೋ ಆಗಿ ಕಾಣಿಸಿಕೊಂಡರೆ, ಸುದೀಪ್ ವಿಲನ್ ಪಾತ್ರ ಮಾಡಿದ್ದರು. ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಾನಿ ಪರಿಚಯ ಸಾನ್ವಿಗೆ ಆಗಿತ್ತು. ಆ ಬಾಂಡಿಂಗ್ ಈಗಲೂ ಮುಂದುವರಿದಿದೆ.
https://www.instagram.com/reel/DI08aVGvAYB/?igsh=MTk1eTk4eXp3eXM1MQ==
Kasturirangan passes away ಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತೂರಿರಂಗನ್ ನಿಧನ