newsics.com
ಭಾರತೀಯ ಮೂಲದ ಸುಂದರ್ ಪಿಚೈ ನೇತೃತ್ವದ ಗೂಗಲ್ ಮತ್ತೊಮ್ಮೆ ತನ್ನ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ. ಭಾರತದಲ್ಲಿ ಜಾಹೀರಾತು, ಮಾರಾಟ ಮತ್ತು ಮಾರ್ಕೆಟಿಂಗ್ ತಂಡಗಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಕೆಲಸ ಕಳೆದುಕೊಳ್ಳುವುದು ಖಚಿತ ಎನ್ನಲಾಗಿದೆ.
ಹೈದರಾಬಾದ್ ಮತ್ತು ಬೆಂಗಳೂರಿನ ಕಚೇರಿಗಳಲ್ಲೇ ಹೆಚ್ಚು ಉದ್ಯೋಗ ಕಡಿತ ಇರಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಗೂಗಲ್ ಅಧಿಕೃತವಾಗಿ ಉದ್ಯೋಗ ಕಡಿತದ ನಿಖರ ಸಂಖ್ಯೆಯನ್ನು ಹೇಳಿಲ್ಲ. ಆದರೆ ಜಾಹೀರಾತು, ಮಾರಾಟ ಮತ್ತು ಮಾರ್ಕೆಟಿಂಗ್ ತಂಡದಲ್ಲಿರುವ ಬಹುತೇಕ ಉದ್ಯೋಗಿಗಳು ವಜಾಗೊಳಿಸುವಿಕೆಯ ತೂಗುಗತ್ತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಆಂಡ್ರಾಯ್ಡ್, ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳು ಮತ್ತು ಕ್ರೋಮ್ ಬ್ರೌಸರ್‌ಗಳನ್ನು ನೋಡಿಕೊಳ್ಳುವ ತನ್ನ ಪ್ಲಾಟ್‌ಫಾರ್ಮ್‌ಗಳು ಮತ್ತು ಬಿಡಿಭಾಗದ ಸಾಧನಗಳ ವಿಭಾಗದಲ್ಲಿ ನೂರಾರು ಉದ್ಯೋಗಗಳನ್ನು ಕಡಿತಗೊಳಿಸುವ ಗೂಗಲ್‌ನ ಇತ್ತೀಚಿನ ನಿರ್ಧಾರದ ನಂತರ ಈ ಕ್ರಮಕ್ಕೆ ತೀರ್ಮಾನ ತೆಗೆದುಕೊಂಡಿದೆ ಎನ್ನಲಾಗಿದೆ.
https://www.newsics.com/2025/04/17/the-lover-called-his-lover-home-and-cut-off-his-private-parts/