newsics.com
ಇದು ಕೃತಕ ಬುದ್ಧಿಮತ್ತೆಯ (ಎಐ Artificial Intelligence) ಜಮಾನಾ. ಎಲ್ಲೆಲ್ಲೂ ಎಐನದ್ದೇ ಮಾತು. ಸಿನಿಮಾರಂಗಕ್ಕೂ ಈ ಕೃತಕ ಬುದ್ಧಿಮತ್ತೆ ಕಾಲಿಟ್ಟಿದೆ.
ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯನ್ನೇ ಬಳಸಿಕೊಂಡು ಸಿನಿಮಾವೊಂದನ್ನು ಕನ್ನಡದಲ್ಲಿ ತಯಾರು ಮಾಡಲಾಗಿದೆ.
‘ಲವ್ ಯು’ ಹೆಸರಿನ ಮೊದಲ ಸಿನಿಮಾವನ್ನು ರೆಡಿ ಎಐ ಮೂಲಕ ಸಿದ್ದಪಡಿಸಲಾಗಿದೆ. ಈ ಚಿತ್ರವೀಗ ರಿಲೀಸ್‌ಗೂ ರೆಡಿಯಾಗಿದೆ.
‘ಲವ್ ಯು’ ಸಿನಿಮಾವನ್ನು ಎಸ್. ನರಸಿಂಹ ಅವರು ನಿರ್ದೇಶನ ಮಾಡಿದ್ದು, ಈ ಸಿನಿಮಾದ ನಿರ್ದೇಶನ ಮತ್ತು ನಿರ್ಮಾಪಕರನ್ನು ಹೊರತುಪಡಿಸಿದರೆ, ಮತ್ತೆಲ್ಲ ಕೆಲಸಗಳನ್ನೂ ಎಐ ತಂತ್ರಜ್ಞಾನವೇ ಮಾಡಿರುವುದು ವಿಶೇಷ. ಇದು ವಿಶ್ವದಲ್ಲಿಯೇ ಸಂಪೂರ್ಣ AI ನಿರ್ಮಿತ ಮೊದಲ ಸಿನಿಮಾ ಎಂಬುದು ನಿರ್ದೇಶಕರ ಹೇಳಿಕೆ.
ಈ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರ, ಆ ಪಾತ್ರಗಳ ಸಂಭಾಷಣೆ, ಹಾಡು, ಸಿನಿಮಾಟೋಗ್ರಫಿ, ಧ್ವನಿ ವಿನ್ಯಾಸ, ಸೀನ್‌ನಲ್ಲಿ ಬರುವ ಸ್ಥಳಗಳು, ಕಲರಿಂಗ್ ಹೀಗೆ ಎಲ್ಲಾ ಕೆಲಸಗಳಿಗೂ ಎಐ ತಂತ್ರಜ್ಞಾನ ಬಳಕೆ ಮಾಡಲಾಗಿದೆ.
ಸುಂದರ್ ರಾಜ್ ಗುಂಡೂರಾವ್ ಅವರು ಇಡೀ ಪ್ರಾಜೆಕ್ಟ್‌ನ ನೇತೃತ್ವ ವಹಿಸಿದ್ದಾರೆ. ಇಡೀ ತಂಡ ಕ್ರಿಯೇಟಿವ್ ಆಗಿ ಕೆಲಸ ಮಾಡಿದೆ ಎನ್ನುತ್ತಾರೆ, ‘ಲವ್ ಯು’ ಸಿನಿಮಾದ ನಿರ್ದೇಶಕ ನರಸಿಂಹಮೂರ್ತಿ.
ಈ ಸಿನಿಮಾದಲ್ಲಿ 12 ಹಾಡುಗಳಿದ್ದು, 95 ನಿಮಿಷಗಳ ಅವಧಿಯನ್ನು ಹೊಂದಿದೆ. ಸೆನ್ಸಾರ್ ಮಂಡಳಿ ಕೂಡ ಈ ಸಿನಿಮಾವನ್ನು ವೀಕ್ಷಣೆ ಮಾಡಿ, ಯು/ಎ ಪ್ರಮಾಣ ಪತ್ರ ನೀಡಿದೆ. ನೇರವಾಗಿ ಥಿಯೇಟರ್‌ನಲ್ಲೇ ಸಿನಿಮಾವನ್ನು ರಿಲೀಸ್ ಮಾಡಬೇಕು ಎಂಬುದು ಚಿತ್ರತಂಡದ ಯೋಜನೆಯಾಗಿದ್ದು, ಮೇ ಅಥವಾ ಜೂನ್ ವೇಳೆಗೆ ತೆರೆಕಾಣುವ ಸಾಧ್ಯತೆಯಿದೆ.
Good Bad Ugly ಗುಡ್ ಬ್ಯಾಡ್ ಅಗ್ಲಿ ಚಿತ್ರ ತಂಡಕ್ಕೆ ₹5 ಕೋಟಿ ಡಿಮ್ಯಾಂಡ್ ಇಟ್ಟ ಸಂಗೀತ ನಿರ್ದೇಶಕ -ಕಾರಣವೇನು?