newsics.com
ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನದ ನಂತರ, ನಟಾಶಾ ಸ್ಟಾಂಕೋವಿಕ್ ಮತ್ತೆ ಮಾಡೆಲಿಂಗ್‌ಗೆ ಮರಳಿದ್ದಾರೆ. ಇತ್ತೀಚೆಗೆ ಫ್ಯಾಷನ್ ಶೋನಲ್ಲಿ ತಮ್ಮ ಮಗ ಅಗಸ್ತ್ಯನೊಂದಿಗೆ ಪಾಲ್ಗೊಂಡಿದ್ದಕ್ಕಾಗಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಚಿಕ್ಕ ಮಗುವನ್ನು ಅಂತಹ ಸ್ಥಳಕ್ಕೆ ಕರೆತಂದಿದ್ದಕ್ಕಾಗಿ ಅವರನ್ನು ಟೀಕಿಸಿದ್ದಾರೆ.
ನತಾಶಾ ತನ್ನ ಪ್ರೀತಿಯ ಮಗನೊಂದಿಗೆ ಈ ಫ್ಯಾಷನ್ ಶೋಗೆ ಹೋಗಿದ್ದಾರೆ. ಅವರು ರ‍್ಯಾಂಪ್ ಮೇಲೆ ನಡೆಯುತ್ತಿದ್ದಾಗ, ಅಗಸ್ತ್ಯ ಪ್ರೇಕ್ಷಕರ ಜೊತೆ ಕುಳಿತು, ತಮ್ಮ ತಾಯಿಗೆ ಪ್ರೋತ್ಸಾಹ ನೀಡಿದ್ದಾನೆ. ಈ ಕಾರ್ಯಕ್ರಮದಲ್ಲಿ ನತಾಶಾ ಸ್ನೇಹಿತ ಅಲೆಕ್ಸಾಂಡರ್ ಅಲೆಕ್ಸ್ ಕೂಡ ಅಗಸ್ತ್ಯ ಜೊತೆ ಕುಳಿತಿದ್ದರು.
ಕೆಲವರಿಗೆ ಈ ರೀತಿ ಚಿಕ್ಕ ಮಕ್ಕಳನ್ನು ವಯಸ್ಕರ ಫ್ಯಾಷನ್ ಶೋಗೆ ಕರೆತರುವುದು ಇಷ್ಟವಾಗಲಿಲ್ಲ. ‘ಇದು ಮಕ್ಕಳಿಗೆ ಸೂಕ್ತ ಸ್ಥಳವಲ್ಲ. ಇಂತಹ ಕಾರ್ಯಕ್ರಮಕ್ಕೆ ಚಿಕ್ಕ ಮಕ್ಕಳನ್ನು ಏಕೆ ಕರೆದುಕೊಂಡು ಹೋಗಬೇಕು?” ಎಂದು ನೆಟ್ಟಿಗರು ಕೇಳಿದ್ದಾರೆ. ಹಾರ್ದಿಕ್ ಮತ್ತು ನತಾಶಾ ಅವರ ಮಗ ಅಗಸ್ತ್ಯನಿಗೆ ನಾಲ್ಕು ವರ್ಷ. ನಾಲ್ಕು ವರ್ಷದ ಮಗುವನ್ನು ಫ್ಯಾಷನ್ ಶೋಗೆ ಕರೆದುಕೊಂಡು ಹೋಗುವುದು ಎಷ್ಟು ಸೂಕ್ತ ಎಂದು ಕೆಲವರು ಪ್ರಶ್ನಿಸಿದ್ದಾರೆ.