newsics.com
ಕರಾವಳಿ ಪ್ರದೇಶದ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳವನ್ನು ಸಂರಕ್ಷಿಸಬೇಕಾಗಿದೆ. ದಕ್ಷಿಣ ಕನ್ನಡದ ಧಾರ್ಮಿಕ ಚಿಂತನೆಗಳ ಮೇಲೆ ಜಗತ್ತಿಗೇ ಅಪಾರ ನಂಬಿಕೆ ಇದೆ. ಸೋಲುವುದು ಹೇಗೆಂದು ಕಲಿಯದಿದ್ದರೆ ಗೆಲ್ಲಲು ಸಾಧ್ಯವಿಲ್ಲ. ಹಾಗೇ ಈ ಕಂಬಳ ಕ್ರೀಡೆಯಲ್ಲಿ ಹೃದಯವಂತಿಕೆ ಮುಖ್ಯವಾಗಿರಲಿ. ಕಂಬಳ ಕ್ರೀಡೆಯಿಂದ ನಮ್ಮ ಸಂಪ್ರದಾಯ- ಪರಂಪರೆ ಬೆಳೆಯುತ್ತಿದೆ.
ಗುರುಪುರದಲ್ಲಿ ನಿನ್ನೆ ನಡೆದ ಮೂಳೂರು-ಅಡ್ಡೂರು ಜೋಡುಕರೆ ಕಂಬಳದಲ್ಲಿ ರೋಮಾಂಚಕಾರಿ ಸಂಗತಿಯೊಂದು ನಡೆದಿದೆ. ಕಂಬಳ ಓಟದ ವೇಳೆ ಕೋಣಗಳಿಗೆ ಕಟ್ಟಿದ್ದ ನೇಗಿಲು ಜಾರಿ ಕೆಳಗೆ ಬಿದ್ದರೂ ಓಟಗಾರನಿಲ್ಲದೆಯೇ ಕೋಣಗಳು ಗುರಿ ತಲುಪಿ ಇತಿಹಾಸ ಸೃಷ್ಟಿಸಿವೆ.
ಮಾಣಿ ಸಾಗು ಮನೆ (ಎ) ಮತ್ತು ಹೊಸ್ಮಾರ್ ಸೂರ್ಯಶ್ರೀ (ಬಿ) ತಂಡದ ಮಧ್ಯೆ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಿತು. ಈ ವೇಳೆ ಹೊಸ್ಮಾರ್ ಸೂರ್ಯಶ್ರೀ ತಂಡದ ಕೋಣಗಳಾದ ಕೃಷ್ಣಾಪುರ ನಡುಮನೆ ಪರಮೇಶ್ವರ್ ಸಾಲ್ಯಾನ್ ಅವರ ಕಿಂಗ್ ಕೆಪಿ ಬೊಲ್ಲೆ ಮತ್ತು ಹೊಸ್ಮಾರ್ ಸೂರ್ಯಶ್ರೀ ತಂಡದ ಬಾರ್ಗಿಕೋಣಗಳು ಓಟಗಾರನಿಲ್ಲದೆಯೇ ಗುರಿ ತಲುಪಿದೆ. ಪಟ್ಟು ಬಿಡದ ಕೋಣಗಳು 10.67 ಸೆಕೆಂಡ್‌ನಲ್ಲಿ 110 ಮೀಟರ್ ಓಡಿ ಗೆದ್ದಿದೆ.
ಕೋಣಗಳಿಗೆ ಸ್ಪರ್ಧೆಗೂ ಮುನ್ನ ನೇಗಿಲು ಕಟ್ಟುವವರು ನೇಗಿಲನ್ನು ಬಿಗಿಯಾಗಿ ಕಟ್ಟಿರಲಿಲ್ಲ. ಹೀಗಾಗಿ ಕೋಣಗಳಿಗೆ ನೇಗಿಲು ಬಿಗಿಯಾದ ಕಟ್ಟದ ಪರಿಣಾಮ ಆರಂಭಿಕ ಹಂತದಲ್ಲೇ ನೇಗಿಲು ಕೆಳಗೆ ಜಾರಿ ಬಿತ್ತು. ಪರಿಣಾಮ ಓಟಗಾರ ಕೂಟ ಅಲ್ಲೇ ಉಳಿದರು.