newsics.com
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಗೆ ತೆರಳಿದ್ದ ಆರೋಪದಲ್ಲಿ ಗ್ರೇಡಿಯಂಟ್ ಕ್ಲೀನ್ ವಾಟರ್ ಸೊಲ್ಯೂಷನ್ ಸ್ಟಾರ್ಟ್ಅಪ್ನ ಸಿಇಒ ಅನುರಾಗ್ ಬಾಜಪೇಯಿನನ್ನು ಅಮೆರಿಕದಲ್ಲಿ ಬಂದಿಸಲಾಗಿದೆ.
ಅವರು ಒಂದು ಗಂಟೆ ಲೈಂಗಿಕ ಕ್ರಿಯೆ ನಡೆಸಲು ಸುಮಾರು 50,000 ಪಾವತಿಸಿದ್ದರು ಎನ್ನಲಾಗಿದೆ. ಜೊತೆಗೆ ಅವರೊಂದಿಗೆ ಅನೇಕ ಪುರುಷರು ಕೂಡ ಇದ್ದರು ಎಂಬುದಾಗಿ ವರದಿಗಳು ಹೇಳಿವೆ.
ಹಾರ್ವರ್ಡ್ ವಿಶ್ವವಿದ್ಯಾಲಯದ ಬಳಿ ದುಬಾರಿ ಅಪಾರ್ಟ್ಮೆಂಟ್ಗಳಲ್ಲಿ ನಡೆಯುತ್ತಿತ್ತು ಎನ್ನಲಾದ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ಭಾರತೀಯ-ಅಮೇರಿಕನ್ ಸಿಇಒ ಮತ್ತು ಶತಕೋಟಿ ಡಾಲರ್ ಮೌಲ್ಯದ ವಾಟರ್ ಟೆಕ್ ಸಂಸ್ಥೆ ಗ್ರೇಡಿಯಂಟ್ನ ಸಹ-ಸಂಸ್ಥಾಪಕ ಅನುರಾಗ್ ಬಾಜಪೇಯಿ ಭಾಗಿಯಾಗಿರುವುದು ಉನ್ನತ ಮಟ್ಟದ ತನಿಖೆಯಲ್ಲಿ ಬಹಿರಂಗವಾಗಿದೆ. ಈ ವೇಶ್ಯಾವಾಟಿಕೆ ಜಾಲವು ವೈದ್ಯರು, ವಕೀಲರು, ಕಾರ್ಪೊರೇಟ್ ಕಾರ್ಯನಿರ್ವಾಹಕರು ಮತ್ತು ಸಾರ್ವಜನಿಕ ಅಧಿಕಾರಿಗಳ ಕಕ್ಷಿದಾರರಿಗೆ ಸೇವೆ ನೀಡುತ್ತಿತ್ತು ಎಂದು ತಿಳಿದುಬಂದಿದೆ.
https://www.newsics.com/2025/04/13/gold-lovers-riot-after-seeing-the-skyrocketed-price-of-gold/