newsics.com
‘ಛಾವ’ ಸಿನಿಮಾವನ್ನು ಪೈರಸಿ ಮಾಡಿದ್ದ ಕಿಡಿಗೇಡಿಯನ್ನು ಮುಂಬೈನ ದಕ್ಷಿಣ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಹಲವು ಶಾಕಿಂಗ್ ವಿಚಾರಗಳು ಬಯಲಾಗಿವೆ.
ಫೆಬ್ರವರಿ 14ರಿಂದ ಮಾರ್ಚ್ 20ರ ತನಕ ‘ಛಾವ’ ಸಿನಿಮಾದ 1818 ಪೈರಸಿ ಲಿಂಕ್ಗ್ಳು ಹರಿದಾಡಿವೆ. ಇದರಿಂದಾಗಿ ಚಿತ್ರದ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟ ಆಗಿದೆ. ಆದ್ದರಿಂದ ನಿರ್ಮಾಪಕರು ದೂರು ನೀಡಿದ್ದಾರೆ. ಅದರ ಅನ್ವಯ ಈಗ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.
ಸಾಗರ್ ಮಾಣಿಕ್ ರಂಧಾವನ್ ಎಂಬಾತನನ್ನು ಬಂಧಿಸಿದ್ದಾರೆ. ಸಿನಿಮಾಗಳನ್ನು ಪೈರಸಿ ಮಾಡಲು ಈತ ತಮ್ಮದೇ ಆ್ಯಪ್ ತಯಾರಿಸಿಕೊಂಡಿದ್ದ ಎಂಬುದು ತಿಳಿದು ಬಂದಿದೆ.
ಅದರಲ್ಲಿ ಪೈರಸಿ ಸಿನಿಮಾಗಳ ಪ್ರಸಾರ ಮಾಡಿ ಹಣ ಗಳಿಸುತ್ತಿದ್ದ. ‘ಛಾವ’ ಸಿನಿಮಾವನ್ನು ಕೂಡ ಇದೇ ಆ್ಯಪ್ನಲ್ಲಿ ಪ್ರಸಾರ ಮಾಡಿದ್ದ ಎನ್ನಲಾಗಿದೆ. ಸದ್ಯಕ್ಕೆ ಈತ ಪೊಲೀಸ್ ವಶದಲ್ಲಿ ಇದ್ದಾನೆ. ತನಿಖೆ ಮುಂದುವರಿಯುತ್ತಿದೆ.
https://www.newsics.com/2025/04/11/bjp-aiadmk-alliance-in-tamil-nadu-amit-shah-announces/