newsics.com /ನ್ಯೂಸಿಕ್ಸ್
ಬೆಂಗಳೂರು: ಚುನಾವಣಾ ಚಾಣಕ್ಯ ಎಂದೇ ಖ್ಯಾತಿ ಪಡೆದ ಸುನೀಲ್ ಕನುಗೋಳ್ (Sunil Kanugolu) ಅವರನ್ನು ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರನನ್ನಾಗಿ (Chief Advisor to the Chief Minister) ನೇಮಿಸಿ ಸಿಎಂ ಡಿಕೆ ಶಿವಕುಮಾರ್ (CM DK Shivakumar) ಆದೇಶಿಸಿದ್ದಾರೆ.
ಇದರಿಂದಾಗಿ ಸುನಿಲ್‌ಗೆ ಕರ್ನಾಟಕದ (Karnataka) ಸಂಪುಟ ಸಚಿವರ (cabinet minister) ಸ್ಥಾನಮಾನ ಸಿಗಲಿದೆ.
ಸುನೀಲ್ ಕನಗೋಳ್ ಈ ಹಿಂದೆ ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ದಾಗ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರಾಗಿದ್ದರು. ಇದೀಗ ತಮಗೂ ಅವರನ್ನೇ ಮುಖ್ಯ ಸಲಹೆಗಾರನನ್ನಾಗಿ ಡಿಕೆಶಿ ನೇಮಿಸಿಕೊಂಡಿದ್ದಾರೆ.
ಮುಂದಿನ ಚುನಾವಣೆಗಳ ಗೆಲುವು ಹಾಗೂ ಸರ್ಕಾರದ ಪರ ಜನರ ಒಲವು ಬರುವ ರೀತಿಯಲ್ಲಿ ಸುನೀಲ್ ಕನಗೋಳ್ ಸಲಹೆಯಂತೆ ಡಿಕೆಶಿ ಕಾರ್ಯ ನಿರ್ಹಹಿಸಲಿದ್ದಾರೆ.
ಸುನೀಲ್ ಕಣಗೋಳು ಒಬ್ಬ ಪ್ರಮುಖ ಭಾರತೀಯ ಚುನಾವಣಾ ತಂತ್ರಗಾರ (election strategist) ಮತ್ತು ರಾಜಕೀಯ ಸಲಹೆಗಾರರಾಗಿದ್ದಾರೆ. ಬಳ್ಳಾರಿ ಮೂಲದ ಇವರು ಮೊದಲು McKinsey ಕಂಪನಿಯಲ್ಲಿ ಕೆಲಸ ಮಾಡಿದ್ದರು. ನಂತರ ಪ್ರಶಾಂತ್ ಕಿಶೋರ್ ಅವರ I-PAC ನಲ್ಲಿ ಸೇರಿ ರಾಜಕೀಯ ತಂತ್ರಗಳಲ್ಲಿ ತೊಡಗಿದರು.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಪ್ರಧಾನಿ ಅಭಿಯಾನದಲ್ಲಿ ಸುನೀಲ್ ಕಣಗೋಳು ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಅವರು ಈಗ ಕಾಂಗ್ರೆಸ್ ಪಕ್ಷದ ಪ್ರಮುಖ ತಂತ್ರಗಾರರಲ್ಲಿ ಒಬ್ಬರು. ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗೆಲುವಿಗೆ ಮುಖ್ಯ ಕಾರಣರಾಗಿದ್ದರು.
ತೆಲಂಗಾಣದಲ್ಲಿ 2023ರಲ್ಲಿ ಕಾಂಗ್ರೆಸ್ ಗೆಲುವಿಗೆ ಮುಖ್ಯ ತಂತ್ರಗಾರ ಇವರಾಗಿದ್ದರು. ಇತ್ತೀಚೆಗೆ ಕೇರಳಂನಲ್ಲಿ 2026ರ ಚುನಾವಣೆ, ಮಹಾರಾಷ್ಟ್ರ ಇತ್ಯಾದಿ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಸಲಹೆ ನೀಡುತ್ತಿದ್ದಾರೆ. ಸದ್ಯ ಅವರು Inclusive Minds ಎಂಬ ಬೆಂಗಳೂರು ಮೂಲದ ಕಂಪನಿಯನ್ನು ನಡೆಸುತ್ತಾರೆ ಮತ್ತು ಡೇಟಾ-ಆಧಾರಿತ ಚುನಾವಣಾ ತಂತ್ರಗಳಲ್ಲಿ ಪರಿಣತರು. ರಾಜಕೀಯದಲ್ಲಿ “ಮಾಸ್ಟರ್ ಮೈಂಡ್” ಎಂದು ಪ್ರಸಿದ್ಧಿ ಪಡೆದಿದ್ದಾರೆ.
ಕರ್ನಾಟಕದಲ್ಲಿ ಹೆಚ್ಚುತ್ತಿರುವ HIV ಪ್ರಕರಣಗಳು: ಯುವ ಪೀಳಿಗೆಗಳಲ್ಲಿಯೇ ಈ ಸೋಂಕು ಹೆಚ್ಚು!
MUDA case ಮುಡಾ ಹಗರಣ: ಸಿದ್ದರಾಮಯ್ಯ ಮೇಲ್ಮನವಿ, ಹೈಕೋರ್ಟ್ ಖಡಕ್ ಮಾತು