newsics.com
ತುಮಕೂರು : ಸಚಿವ ಕೆ.ಎನ್ ರಾಜಣ್ಣ ಪುತ್ರನೂ ಆಗಿರುವ ಎಂಎಲ್ಸಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ನಡುವೆಯೇ ಸುಪಾರಿಗೆ ಸಂಚು ರೂಪಿಸಿದ್ದ ಸ್ಫೋಟಕ ಆಡಿಯೋ ರಿಲೀಸ್ ಆಗಿತ್ತು. ಆಡಿಯೋದಲ್ಲಿ ಮಾತಾಡಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಚಿವ ರಾಜಣ್ಣ ಪುತ್ರ ರಾಜೇಂದ್ರ ಹತ್ಯೆಗೆ ಯತ್ನ ಪ್ರಕರಣ ತನಿಖೆಯನ್ನು ಕ್ಯಾತಸಂದ್ರ ಪೊಲೀಸರು ಚುರುಕುಗೊಳಿಸಿದ್ದಾರೆ. ಎಂಎಲ್ಸಿ ರಾಜೇಂದ್ರ ಅವರು ಆರೋಪ ಮಾಡಿದ ಹಾಗೆ 18 ನಿಮಿಷಗಳ ಆಡಿಯೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಡಿಯೋದಲ್ಲಿ ಇಬ್ಬರ ಮಾತಿನ ಸಂಭಾಷಣೆ ಇದ್ದು, ಪುಷ್ಪ ಹಾಗೂ ರಾಕಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಆಡಿಯೋದಿಂದಲೇ ಕೊಲೆ ಸುಪಾರಿ ಸಂಚು ಬಯಲಿಗೆ ಬಂದಿದೆ. ಆಡಿಯೋದಲ್ಲಿ ಮಾತಾಡಿದ್ದ ಮಹಿಳೆಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಎ1 ಆರೋಪಿ ಸೋಮನ ಜೊತೆಗಿದ್ದು ಆತನಿಂದಲೇ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದ ಪುಷ್ಪ ಅದನ್ನು ರಾಕಿ ಎಂಬುವವರ ಜೊತೆ ಹಂಚಿಕೊಂಡಿದ್ದರು. ಕೊಲೆ ಸಂಚಿನ ವಿಚಾರವನ್ನು ರಾಜೇಂದ್ರ ಅವರಿಗೆ ತಿಳಿಸಲು ರಾಕಿ ಈ ಪ್ಲಾನ್ ಮಾಡಿದ್ದರನ್ನಲಾಗಿದೆ.
ಕೊಲೆ ಸಂಚಿನ ಬಗ್ಗೆ ಪುಷ್ಪ ಮಾತನಾಡಿದ್ದನ್ನು ಮೊಬೈಲ್ ನಲ್ಲಿ ಮಾತನಾಡಿದ್ದನ್ನು ರಾಕಿ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ರಾಜೇಂದ್ರ ಅವರಿಗೆ ತಲುಪಿಸಿದ್ದರು. ಈ ಆಡಿಯೋ ಕೇಳಿ ಶಾಕ್ ಗೆ ಒಳಗಾದ ರಾಜೇಂದ್ರ ಎಸ್ಪಿ ಕಚೇರಿಯಲ್ಲಿ ದೂರು ನೀಡಿದ್ದರು.