newsics.com
ರಾಕೆಟ್ ಅನ್ನು ಯುರೂಪಿಯನ್ ಖಾಸಗಿ ಬಾಹ್ಯಾಕಾಶ ಸಂಸ್ಥೆ ಅಭಿವೃದ್ಧಿಪಡಿಸಿತ್ತು. ಯುರೋಪಿನಿಂದ ಉಪಗ್ರಹ ಉಡಾವಣೆಗಳನ್ನು ತೀವ್ರಗೊಳಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ನಾರ್ವೆಯಲ್ಲಿ ರಾಕೆಟ್ ಟೇಕ್ ಆಫ್ ಆದ ತಕ್ಷಣ ಪತನಗೊಂಡಿದೆ. ಕಡಲಿಗೆ ಅಪ್ಪಳಿಸಿ ಸ್ಫೋಟಗೊಂಡಿದೆ. ಈ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.
ಸ್ಪೆಕ್ಟ್ರಮ್ ರಾಕೆಟ್ ಯುರೋಪ್ನಿಂದ ಯಶಸ್ವಿ ಉಡಾವಣೆಗೆ ಪ್ರಯತ್ನಿಸ್ತಿದೆ. ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸ್ವೀಡನ್, ಬ್ರಿಟನ್ ಮತ್ತು ಇತರ ದೇಶಗಳು ವಾಣಿಜ್ಯ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಬಯಕೆ ವ್ಯಕ್ತಪಡಿಸಿವೆ. ರಾಕೆಟ್ ಸ್ಫೋಟದ ಹೊರತಾಗಿಯೂ ಈ ಘಟನೆ ಭವಿಷ್ಯದ ಕಾರ್ಯಾಚರಣೆಗಳಿಗೆ ಉಪಯುಕ್ತವಾಗಬಹುದಾದ ಪ್ರಮುಖ ಡೇಟಾಗಳನ್ನು ಒದಗಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.
ನಾರ್ವೆಯ ಆರ್ಕ್ಟಿಕ್ ಆಂಡೋಯಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾದ ಸ್ಪೆಕ್ಟ್ರಮ್ ರಾಕೆಟ್ ಅನ್ನು ಸಣ್ಣ ಮತ್ತು ಮಧ್ಯಮ ಗಾತ್ರದಲ್ಲಿ ವಿನ್ಯಾಸಗೊಳಿಸಲಾಗಿತ್ತು. ಮೊದಲ ಪರೀಕ್ಷಾರ್ಥ ಹಾರಾಟ ಹಿನ್ನೆಲೆಯಲ್ಲಿ ಯಾವುದೇ ಪೇಲೋಡ್ ಹೊಂದಿರಲಿಲ್ಲ. ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ ಏನೆಂದರೆ ಸ್ಥಳೀಯ ಜ್ಞಾನವನ್ನು ಬಳಸಿಕೊಂಡು ಉಡಾವಣಾ ವಾಹನ ನಿರ್ಮಾಣ ಮಾಡುವುದಾಗಿದೆ ಎಂದು ಹೇಳಿದೆ.