newsics.com
ಬೆಂಗಳೂರು: ರಂಜಾನ್ ಹಬ್ಬದ ಪ್ರಯುಕ್ತ ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಇನ್ನು ಅನೇಕ ಕಡೆಗಳಲ್ಲಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ.
ಬೆಂಗಳೂರು ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ವಿವರ ಇಲ್ಲಿದೆ
- ಮೈಸೂರು ರಸ್ತೆಯ ಪೋಲ್ಗೇಟ್ ಜಂಕ್ಷನ್ ನಿಂದ ಬಿಬಿ ಜಂಕ್ಷನ್ ಮೂಲಕ ಬಿಜಿಎಸ್ ಫ್ಲೈಓವರ್ ಮೇಲ್ಬಾಗದಿಂದ ಟೌನ್ ಹಾಲ್ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮೈಸೂರು ಕಡೆಯಿಂದ ಟೌನ್ ಹಾಲ್ ಕಡೆಗೆ ಹೋಗುವ ವಾಹನಗಳು ಬ್ಯಾಟರಾಯನಪುರ ಸಂಚಾರ ರಾಣಾ ಸರಹದ್ದಿನ ಕಿತ್ತೋ ಜಂಕ್ಷನ್ನಲ್ಲಿ ಎಡತಿರುವು ಪಡೆದುಕೊಂಡು ವಿಜಯನಗರ ಮೂಲಕ ಸಾಗಬಹುದು.
- ಟೌನ್ಹಾಲ್ ಕಡೆಯಿಂದ ಮೈಸೂರು ಕಡೆಗೆ ಬಿಜಿಎಸ್ ಫ್ಲೈಓವರ್ ಮೇಲ್ಬಾಗದಿಂದ ಬಿಬಿ ಜಂಕ್ಷನ್ ಮಾರ್ಗವಾಗಿ ಟೋಲ್ಗೇಟ್ ಜಂಕ್ಷನ್ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
- ಟೌನ್ಹಾಲ್ ಕಡೆಯಿಂದ ಮೈಸೂರು ಕಡೆಗೆ ಹೋಗುವ ವಾಹನಗಳು ಬಿಜಿಎಸ್ ಫ್ಲೈಓವರ್ ಕೆಳಗಡೆ ಸರ್ವಿಸ್ ರಸ್ತೆಯನ್ನು ಬಳಸಿಕೊಂಡು ಭಾರಿ ವಾಹನಗಳು ವೆಟರ್ನರಿ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಗೂಡ್ಶೆಡ್ ರಸ್ತೆ ಮೂಲಕ ಮತ್ತು ಲಘುವಾಹನಗಳು ಸಿರ್ಸಿ ಜಂಕ್ಷನ್ನಲ್ಲಿ ಬಲ ತಿರುವು ಪಡೆದುಕೊಂಡು ಜೆ.ಜೆ ನಗರ-ಟ್ಯಾಂಕ್ ಬಂಡ್ ರಸ್ತೆ ಬಿನ್ನಿಮಿಲ್ ಜಂಕ್ಷನ್- ಹುಣಸೇಮರ ಮೂಲಕ ಸಾಗುವುದು.
- ಬಸವನಗುಡಿ ಹಾಗೂ ಚಾಮರಾಜಪೇಟೆ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವಂತಹ ವಾಹನಗಳು ಚಾಮರಾಜಪೇಟೆ 1 ನೇ ಮುಖ್ಯರಸ್ತೆ, 5ನೇ ಅಡ್ಡ ರಸ್ತೆ ಮೂಲಕ ಮೈಸೂರು ರಸ್ತೆ, ಸಿರ್ಸಿ ಸರ್ಕಲ್, ಬಿನ್ನಿಮಿಲ್ ರಸ್ತೆಯ ಮೂಲಕ ಸಾಗುವುದು.
ಈ ವಿಚಾರವಾಗಿ ಪ್ರಕಟಣೆ ಹೊರಡಿಸಿದ್ದು, ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ.
Putin ಪುಟಿನ್ ಹತ್ಯೆಗೆ ಯತ್ನ? ರಷ್ಯಾ ಅಧ್ಯಕ್ಷರ ಅಧಿಕೃತ ಕಾರು ಸ್ಫೋಟ