newsics.com
ಜಗತ್ತಿನ ಅತಿ ಬಲಿಷ್ಠ ನಾಯಕರಲ್ಲಿ ಒಬ್ಬರಾಗಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಳಸುವ ಗರಿಷೃ ಸುರಕ್ಷತಾ ವ್ಯವಸ್ಥೆಯುಳ್ಳ ಲಿಮೋಸಿನ್ ಕಾರು ರಾಜಧಾನಿ ಮಾಸ್ಕೊದ ರಸ್ತೆಯಲ್ಲೇ ಸ್ಫೋಟಗೊಂಡಿದೆ. ಹೀಗಾಗಿ ಪುಟಿನ್ ಹತ್ಯಾ ಯತ್ನ ನಡೆದಿದೆಯೇ ಎಂಬ ಅನುಮಾನ ಉಂಟಾಗಿದೆ.
ರಷ್ಯಾ ಗುಪ್ತಚರ ಸಂಸ್ಥೆ ಎಫ್‌ಎಸ್‌ಬಿಯ ಪ್ರಧಾನ ಕಚೇರಿಯ ಬಳಿ ಈ ಸ್ಫೋಟ ಸಂಭವಿಸಿದೆ. ಆದರೆ ಇದು ಪಿತೂರಿಯ ಭಾಗವೋ ಅಥವಾ ಕಾರಿನಲ್ಲಿನ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಘಟನೆಯ ಬಳಿಕ ರಷ್ಯಾದ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ.
ಅಧ್ಯಕ್ಷರ ನೆಚ್ಚಿನ ಕಾರಿನಲ್ಲಿ ನಡೆದ ಸ್ಫೋಟದ ನಂತರ, ಏಜೆನ್ಸಿಗಳು ಪುಟಿನ್ ಅವರ ಭದ್ರತೆಯ ಬಗ್ಗೆ ಎಚ್ಚರದಿಂದಿವೆ ಮತ್ತು ಕ್ರೆಮ್ಲಿನ್ ಒಳಗೆ ಅವರ ಮೇಲೆ ದಾಳಿಯ ಬೆದರಿಕೆ ಹೆಚ್ಚಾಗಿದೆ. ಐಷಾರಾಮಿ ಕಾರಿನ ವಿಡಿಯೋ ಕೂಡ ಹೊರಬಂದಿದ್ದು, ಅದರಲ್ಲಿ ಕಾರಿನಲ್ಲಿ ಜ್ವಾಲೆಗಳು ಏರುತ್ತಿರುವುದು ಕಂಡುಬಂದಿದೆ.
ಪುಟಿನ್ ಅವರಿಗೆ ಈ ಕಾರನ್ನು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಇನ್ನು ಘಟನೆ ನಡೆದಾಗ ಕಾರಿನೊಳಗೆ ಯಾರಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.